ಲಘುಕಂಪದ ಪರಿಣಾಮ!

7

ಲಘುಕಂಪದ ಪರಿಣಾಮ!

Published:
Updated:

ಸೂಕ್ಷ್ಮ ಪ್ರಕರಣಗಳನ್ನು ನ್ಯಾಯಮೂರ್ತಿಗಳಿಗೆ ಹಂಚಿಕೆ ಮಾಡುವ ಪ್ರಕ್ರಿಯೆಯ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವ ಕ್ರಮಕ್ಕೆ ಮುಖ್ಯ ನ್ಯಾಯಮೂರ್ತಿ ಮುಂದಾಗಿದ್ದಾರೆ (ಪ್ರ.ವಾ., ಜ. 22) ಎಂಬುದು ಸ್ವಾಗತಾರ್ಹ ಸಂಗತಿ.

ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿಯ ಕಾರ್ಯವೈಖರಿ ಬಗ್ಗೆ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದು, ಭೂಮಿ ನಡುಗಿಸುವಷ್ಟು ದೊಡ್ಡ ಸುದ್ದಿಯಲ್ಲದಿದ್ದರೂ, ಸಾಧಾರಣ ಸಂಗತಿಯೇನೂ ಆಗಿರಲಿಲ್ಲ. ಕ್ರಾಂತಿಯನ್ನಲ್ಲದಿದ್ದರೂ ಇದು ತನ್ನ ಉದ್ದೇಶಿತ ಕೆಲಸ ಮಾಡಿರುವುದು ನಿಜ. ನ್ಯಾಯಾಂಗ ನಿರ್ವಹಣೆಯಲ್ಲಿ ಏನಾದರೊಂದು ಐಬು ಇದ್ದಿರಬಹುದೆಂಬ ಸಾರ್ವಜನಿಕರ ಅನುಮಾನವನ್ನು, ಮುಖ್ಯ ನ್ಯಾಯಮೂರ್ತಿಗಳ ಕ್ರಮ ಸಾಬೀತುಗೊಳಿಸಿದೆ. ಆ ಮೂಲಕ, ದೇಶದ ನ್ಯಾಯಾಂಗದ ಮೇಲೆ ಜನರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವಂಥ ಕೆಲಸವೂ ಆಗಿದೆ.

– ಆರ್. ಕೆ. ದಿವಾಕರ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry