ಪ್ರಮುಖರ ಮೇಲೆ ಫ್ರಾಂಚೈಸ್‌ಗಳ ಕಣ್ಣು

7
ಇಂದು 11ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಆಟಗಾರರ ಹರಾಜು

ಪ್ರಮುಖರ ಮೇಲೆ ಫ್ರಾಂಚೈಸ್‌ಗಳ ಕಣ್ಣು

Published:
Updated:
ಪ್ರಮುಖರ ಮೇಲೆ ಫ್ರಾಂಚೈಸ್‌ಗಳ ಕಣ್ಣು

ಬೆಂಗಳೂರು: ಕುತೂಹಲ ಕೆರಳಿಸಿರುವ ಹನ್ನೊಂದನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಆಟಗಾರರ ಹರಾಜು ಪ್ರಕ್ರಿಯೆಗೆ ಉದ್ಯಾನ ನಗರಿಯಲ್ಲಿ ವೇದಿಕೆ ಸಿದ್ಧವಾಗಿದೆ.

ಎರಡು ದಿನಗಳ ಕಾಲ ನಡೆಯುವ ಹರಾಜಿನಲ್ಲಿ ಇಂಗ್ಲೆಂಡ್‌ನ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಮತ್ತು ಭಾರತದ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಅವರು ಗರಿಷ್ಠ ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆ ಇದೆ.

ಸ್ಟೋಕ್ಸ್‌, ಹೋದ ಬಾರಿಯ ಹರಾಜಿನಲ್ಲಿ ₹14.5 ಕೋಟಿಗೆ ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ತಂಡದ ಪಾಲಾಗಿದ್ದರು. ಅಶ್ವಿನ್‌ ಕೂಡ ಇದೇ ತಂಡದಲ್ಲಿ ಆಡಿದ್ದರು. ಅನುಭವಿ ಅಜಿಂಕ್ಯ ರಹಾನೆ ಮೇಲೂ ಫ್ರಾಂಚೈಸ್‌ಗಳು ಹೆಚ್ಚು ಬಿಡ್‌ ಮಾಡುವ ಸಾಧ್ಯತೆ ಇದೆ.

ಕರ್ನಾಟಕದ ಮನೀಷ್‌ ಪಾಂಡೆ, ಕೆ.ಎಲ್‌.ರಾಹುಲ್‌, ರಾಬಿನ್‌ ಉತ್ತಪ್ಪ, ದಿನೇಶ್‌ ಕಾರ್ತಿಕ್‌, ಯಜುವೇಂದ್ರ ಚಾಹಲ್‌ ಮತ್ತು ಕುಲದೀಪ್‌ ಯಾದವ್‌ ಅವರಿಗೂ ಹೆಚ್ಚು ಹಣ ಸಿಗಬಹುದು.

ಮಹಾರಾಷ್ಟ್ರದ ಕೇದಾರ್‌ ಜಾಧವ್‌ ಅವರನ್ನು ಆರ್‌ಸಿಬಿ ತನ್ನಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಬಹುದು. ಕೇದಾರ್‌, ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಮಿಂಚಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಅನುಭವಿ ಆಟಗಾರ ಗೌತಮ್‌ ಗಂಭೀರ್‌, ಶಿಖರ್‌ ಧವನ್‌, ಯುವರಾಜ್‌ ಸಿಂಗ್‌, ಹರಭಜನ್‌ ಸಿಂಗ್‌ ಮತ್ತು ಅಫ್ಗಾನಿಸ್ತಾನದ ರಶೀದ್‌ ಖಾನ್‌, ಈ ಹಿಂದೆ ಆರ್‌ಸಿಬಿ ತಂಡದಲ್ಲಿ ಆಡಿದ್ದ ಕ್ರಿಸ್‌ ಗೇಲ್‌, ಮುಂಬೈ ಇಂಡಿಯನ್ಸ್‌ ತಂಡದಲ್ಲಿದ್ದ ಕೀರನ್‌ ಪೊಲಾರ್ಡ್‌ ಅವರನ್ನು ಸೆಳೆದುಕೊಳ್ಳುವತ್ತಲೂ ಫ್ರಾಂಚೈಸ್‌ಗಳು ಚಿತ್ತ ನೆಟ್ಟಿವೆ.

ಆರಂಭ: ಬೆಳಿಗ್ಗೆ 10ಕ್ಕೆ

ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌

*

*

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry