ಸಿನಿಮಾಕ್ಕಾಗಿ ಏನೆಲ್ಲಾ...

7

ಸಿನಿಮಾಕ್ಕಾಗಿ ಏನೆಲ್ಲಾ...

Published:
Updated:
ಸಿನಿಮಾಕ್ಕಾಗಿ ಏನೆಲ್ಲಾ...

ಬೆಳ್ಳಿತೆರೆ ಮೇಲೆ ಮಿಂಚುವುದಕ್ಕೂ ಮುಂಚೆ ನಟನಟಿಯರು ಸಾಕಷ್ಟು ಕಷ್ಟಪಟ್ಟಿರುತ್ತಾರೆ. ಅನೇಕರು ಸಿಕ್ಸ್‌ ಪ್ಯಾಕ್‌ ಮೂಡಿಸಿಕೊಳ್ಳಲು ಕಷ್ಟ ಪಡುತ್ತಾರೆ. ಆದರೆ ಅಭಿಮಾನಿಗಳ ಆರಾದ್ಯ ದೈವ ರಣವೀರ್‌ ಸಿಂಗ್‌ ನರಪೇತಲನಂತೆ ಕಾಣಲು ಕಷ್ಟ ಪಡುತ್ತಿದ್ದಾರೆ.

‘ಪದ್ಮಾವತ್‌’ ಸಿನಿಮಾದ ಅಲ್ಲಾವುದ್ದೀನ್‌ ಖಿಲ್ಜಿ ಪಾತ್ರಕ್ಕಾಗಿ ಕಟ್ಟುಮಸ್ತಾಗಿದ್ದ ರಣವೀರ್‌ ಸಿಂಗ್‌ ಇದೀಗ ತಮ್ಮ ಮುಂದಿನ ಸಿನಿಮಾ ‘ಗುಲ್ಲಿ ಬಾಯ್‌’ಗಾಗಿ ಸಿಕ್ಕಾಪಟ್ಟೆ ತೆಳ್ಳಗಾಗಿದ್ದಾರೆ. ಚಿತ್ರದಲ್ಲಿ ರ‍್ಯಾಪರ್‌ ಲುಟೇರಾ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದು ಪಾತ್ರ ಬೇಡುವಂತೆ ತೀರಾ ಸಣ್ಣಗಾಗುತ್ತಿದ್ದಾರೆ. ಖಿಲ್ಜಿಯ ಪಾತ್ರ ಹಾಗೂ ಗುಲ್ಲಿಬಾಯ್‌ಗಾಗಿ ದೇಹ ಬದಲಾಯಿಸಿಕೊಂಡ ತಮ್ಮ ಚಿತ್ರವನ್ನು ರಣವೀರ್‌ ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದಾರೆ. ಮೂವತ್ತು ಸಾವಿರಕ್ಕೂ ಹೆಚ್ಚು ಮಂದಿ ರಣವೀರ್‌ ಅವರ ಶ್ರದ್ಧೆಗೆ ಮೆಚ್ಚುಗೆಯನ್ನೂ ಸೂಚಿಸಿದ್ದಾರೆ.

ಬಾಲಿವುಡ್‌ ಜಗತ್ತು ರಣವೀರ್‌ ಅವರ ಈ ಪ್ರಯತ್ನವನ್ನು ಶ್ಲಾಘಿಸಿದೆ. ‘ರಣವೀರ್‌ ಪಾತ್ರಕ್ಕೆ ನ್ಯಾಯ ಒದಗಿಸಿಕೊಡಲು ಏನು ಬೇಕಾದರೂ ಮಾಡುತ್ತಾರೆ. ಹಿಂದಿನ ಚಿತ್ರಕ್ಕಾಗಿ ದೇಹ ಬೆಳೆಸಿಕೊಂಡಿದ್ದ ರಣವೀರ್‌ ಈಗ ಮೂಳೆ ಚರ್ಮದ ಸಣ್ಣನೆಯ ದೇಹಧಾರಿಯಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತವಾಗಿದೆ. ರಣವೀರ್‌ ಅವರ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿರುವಂತೆ ಸಾಕಷ್ಟು ಟ್ರೋಲ್‌ ಕೂಡ ಆಗಿದೆ. ಸಂಬಳ, ಮದುವೆ, ಚುನಾವಣೆ, ಕ್ರಿಕೆಟ್‌ ಹೀಗೆ ಬೇರೆ ಬೇರೆ ಕ್ಷೇತ್ರದ ವಿಷಯವನ್ನಿಟ್ಟುಕೊಂಡು ಈ ಚಿತ್ರಕ್ಕೆ ತಮ್ಮದೇ ಆದ ರೀತಿಯಲ್ಲಿ ಶೀರ್ಷಿಕೆ ಹಾಕಿ ಅನೇಕರು ಶೇರ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry