ರೈಲ್ವೆ ಉದ್ಯೋಗಿಗಳಿಗೆ ಮೊದಲ ವಿದೇಶ ಪ್ರವಾಸ

7

ರೈಲ್ವೆ ಉದ್ಯೋಗಿಗಳಿಗೆ ಮೊದಲ ವಿದೇಶ ಪ್ರವಾಸ

Published:
Updated:

ನವದೆಹಲಿ : ರೈಲ್ವೆ ಇಲಾಖೆಯ ವಿವಿಧ ವಿಭಾಗಗಳ 100 ಉದ್ಯೋಗಿಗಳು ಮೊದಲ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಗ್ಯಾಂಗ್‌ಮನ್‌ಗಳು, ಟ್ರಾಕ್‌ಮನ್‌ಗಳು ಮತ್ತು ನಾನ್ ಗೆಜೆಟೆಡ್ ನೌಕರರನ್ನು ಮಾತ್ರ ಇದಕ್ಕೆ ಆಯ್ಕೆ ಮಾಡಲಾಗಿದೆ.

ಸಿಕಂದರಾಬಾದ್‌ನ ಕೇಂದ್ರ–ಮಧ್ಯ ರೈಲ್ವೆ ವಿಭಾಗದ ಈ ನೌಕರರು ಸಿಂಗಪುರ ಮತ್ತು ಮಲೇಷ್ಯಾಗೆ ಆರು ದಿನಗಳ ಪ್ರವಾಸಕ್ಕೆ ಜನವರಿ 28ರಂದು ತೆರಳಿದ್ದಾರೆ. ಇವೆರೆಲ್ಲರೂ ಬಹುತೇಕ ನಿವೃತ್ತಿಯ ಅಂಚಿನಲ್ಲಿರುವ ಸಿ ಮತ್ತು ಡಿ ದರ್ಜೆಯ ನೌಕರರು.

ಪ್ರವಾಸದ ಖರ್ಚಿನ ಶೇ 25ರಷ್ಟನ್ನು ಉದ್ಯೋಗಿಗಳು ಭರಿಸಿದ್ದರೆ, ಉಳಿದ ಶೇ 75ರಷ್ಟನ್ನು ಸಿಬ್ಬಂದಿ ನಿಧಿಯಿಂದ ನೀಡಲಾಗಿದೆ ಎಂದು ವಿಭಾಗದ ಮುಖ್ಯ ಸರ್ವಜನಿಕ ಸಂಪರ್ಕಾಧಿಕಾರಿ ಎಂ. ಉಮಾಶಂಕರ್ ಕುಮಾರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry