ಬುಧವಾರ, ಡಿಸೆಂಬರ್ 11, 2019
24 °C

ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ: ಅರುಣ್ ಜೇಟ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ: ಅರುಣ್ ಜೇಟ್ಲಿ

ನವದೆಹಲಿ: ವೈಯಕ್ತಿಕ ಆದಾಯ ತೆರಿಗೆ ಸಂಗ್ರಹದ ಬಹುಭಾಗವು ಮಾಸಿಕ ವೇತನ ಪಡೆಯುತ್ತಿರುವ ವರ್ಗದಿಂದ ಸಂಗ್ರಹವಾಗುತ್ತಿದೆ.

ಕಳೆದ ವರ್ಷ 1.89 ಕೋಟಿ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯಾಗಿದೆ ಹಾಗೂ ₹1.44 ಲಕ್ಷ ಕೋಟಿ ತೆರಿಗೆ ಸಂದಾಯವಾಗಿದೆ. ಈ ಬಾರಿ ವೈಯಕ್ತಿಕ ಆದಾಯ ತೆರಿಗೆ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ವೈದ್ಯಕೀಯ ವೆಚ್ಚ ಮತ್ತು ಸಾರಿಗೆ ಭತ್ಯೆ ತೆರಿಗೆ ವಿನಾಯಿತಿ ₹40 ಸಾವಿರಕ್ಕೆ ಪ್ರಸ್ತಾಪಿಸಲಾಗಿದೆ.

₹2.5-5 ಲಕ್ಷ ವರಗಿನ ಆದಾಯಕ್ಕೆ ಶೇ.5ರಷ್ಟು ತೆರಿಗೆ, ₹5–10 ಲಕ್ಷ ವರೆಗೆ ಶೇ.20 ಮತ್ತು ₹10 ಲಕ್ಷ  ಮೇಲ್ಪಟ್ಟ ಆದಾಯಕ್ಕೆ ಶೇ.30 ತೆರಿಗೆ ಪಾವತಿಸಬೇಕಾದ ನಿಯಮ ಮುಂದುವರಿದಿದೆ.

ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಲ್ಲಿ ಹಿರಿಯ ನಾಗರಿಕರ ಠೇವಣಿ ಮೇಲಿನ ಬಡ್ಡಿಗೆ ತೆರಿಗೆ ಮಿತಿಯನ್ನು ₹10 ಸಾವಿರದಿಂದ ₹50 ಸಾವಿರಕ್ಕೆ ಹೆಚ್ಚಿಸಲಾಗಿದೆ.

ಹಿರಿಯರು ನಾಗರಿಕರು ವೈದ್ಯಕೀಯ ವಿಮಾ ಪ್ರೀಮಿಯಂ ಅಡಿಯಲ್ಲಿ ₹50 ಸಾವಿರ ವಿನಾಯಿತಿ ಪಡೆಯಬಹುದು.

ರೈತ ಉತ್ಪಾದಕ ಸಂಸ್ಥೆಗಳಿಗೆ ಮೊದಲ ಐದು ವರ್ಷ ಶೇ 100 ತೆರಿಗೆ ವಿನಾಯಿತಿ ನೀಡುವ ಕುರಿತು ಅರುಣ್‌ ಜೇಟ್ಲಿ ಪ್ರಸ್ತಾಪಿಸಿದರು.

ಪ್ರತಿಕ್ರಿಯಿಸಿ (+)