ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಅಷ್ಟಯಾಮ ಮಹಾ ಯಜ್ಞ

Last Updated 2 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾನೂನು ಬಾಹಿರ ಕಸಾಯಿಖಾನೆಗಳು ಹಾಗೂ ಗೋಹತ್ಯೆ ವಿರೋಧಿಸಿ ಬಿಜೆಪಿಯ ಗೋ ಸಂರಕ್ಷಣಾ ಪ್ರಕೋಷ್ಠ 48 ಗಂಟೆಗಳ ಅಷ್ಟಯಾಮ ಮಹಾಯಜ್ಞ ನಡೆಸುತ್ತಿದೆ.

ಇಲ್ಲಿನ ಜೆ.ಪಿ.ನಗರ ಪುಟ್ಟೇನಹಳ್ಳಿಯ ಸತ್ಯ ಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ಮಧ್ಯಾಹ್ನ ಆರಂಭವಾಗಿರುವ ಅಖಂಡ ಯಜ್ಞದ ಪೂರ್ಣಾಹುತಿ ಶನಿವಾರ ಮಧ್ಯಾಹ್ನ ಎರಡು ಗಂಟೆಗೆ ನಡೆಯಲಿದೆ.

ಉತ್ತರ ಭಾರತದ ವಿವಿಧ ಕಡೆಗಳಿಂದ ಬಂದಿರುವ 50ಕ್ಕೂ ಹೆಚ್ಚು ಯಾಜ್ಞಿಕರು ಇದನ್ನು ನಡೆಸಿಕೊಡುತ್ತಿದ್ದಾರೆ ಎಂದು ಹೋಮದ ಉಸ್ತುವಾರಿ ವಹಿಸಿರುವ ಬೊಮ್ಮನಹಳ್ಳಿ ವಾರ್ಡ್‌ನ ಬಿಜೆಪಿ ಕಾರ್ಪೊರೇಟರ್‌ ಸಿ.ಆರ್. ರಾಮ ಮೋಹನರಾಜು ತಿಳಿಸಿದರು.

‘ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಅನಧಿಕೃತ ಕಸಾಯಿಖಾನೆಗಳು ತಲೆ ಎತ್ತಿವೆ. ಗೋಹತ್ಯೆ ಹೆಚ್ಚುತ್ತಿದೆ. ಗೋಪ್ರೇಮಿಗಳಲ್ಲಿ ಆತಂಕ ಮೂಡಿದೆ. ಇದನ್ನು ನಿಯಂತ್ರಿಸುವ ಸಂಕಲ್ಪ ಬಲಕ್ಕಾಗಿ ಯಜ್ಞ ಮಾಡಲಾಗುತ್ತಿದೆ’ ಎಂದು ಗೋ ಸಂರಕ್ಷಣಾ ಪ್ರಕೋಷ್ಠದ ಸಂಚಾಲಕ ಸಿದ್ಧಾರ್ಥ ಗೋಯೆಂಕಾ ಹೇಳಿದರು.
**
ಗೋ ಸಂರಕ್ಷಣಾ ಯಜ್ಞ ನಡೆಸುತ್ತಿರುವುದು ಹಾಗೂ ಗೋ ರಕ್ಷಣೆಗಾಗಿ ಆಂದೋಲನ ನಡೆಸುವ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ
–ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT