ಪಿಸ್ತೂಲ್ ಮಾರುತ್ತಿದ್ದ ಯುವಕ ಸೆರೆ

7

ಪಿಸ್ತೂಲ್ ಮಾರುತ್ತಿದ್ದ ಯುವಕ ಸೆರೆ

Published:
Updated:

ಬೆಂಗಳೂರು: 7.65 ಎಂಎಂ ಪಿಸ್ತೂಲ್ ಮಾರಲು ಗೊರಗುಂಟೆಪಾಳ್ಯಕ್ಕೆ ಬಂದಿದ್ದ ಮಧ್ಯಪ್ರದೇಶದ ಭರತ್‌ಸಿಂಗ್ ಎಂಬಾತನನ್ನು ಆರ್‌ಎಂಸಿ ಯಾರ್ಡ್‌ ಪೊಲೀಸರು ಬಂಧಿಸಿದ್ದಾರೆ.

ಐದು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಭರತ್, ಮಾಗಡಿ ತಾಲ್ಲೂಕಿನ ಕುದೂರಿನಲ್ಲಿ ನೆಲೆಸಿದ್ದ. ಟೈಲ್ಸ್ ಹಾಕುವ ಕೆಲಸ ಮಾಡುತ್ತಿದ್ದ ಈತ, ಗುರುವಾರ ಬೆಳಿಗ್ಗೆ ಪಿಸ್ತೂಲ್ ಮಾರಲು ಗ್ರಾಹಕರನ್ನು ಹುಡುಕುತ್ತಿದ್ದ. ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ಬಂತು. ಕೂಡಲೇ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದೆವು ಎಂದು ಪೊಲೀಸರು ಹೇಳಿದ್ದಾರೆ.

‘ಈ ಪಿಸ್ತೂಲ್, ಮಧ್ಯಪ್ರದೇಶದಲ್ಲಿರುವ ನನ್ನ ಸಂಬಂಧಿ ಲೋಕೇಶ್‌ಗೆ ಸೇರಿದ್ದು. ಇತ್ತೀಚೆಗೆ ರಾಜ್ಯಕ್ಕೆ ಹೋಗಿದ್ದಾಗ ಕಳ್ಳತನ ಮಾಡಿಕೊಂಡು ಬಂದಿದ್ದೆ.

₹ 25 ಸಾವಿರಕ್ಕೆ ಮಾರಲು ನಿರ್ಧರಿಸಿದ್ದೆ. ಆರು ಗುಂಡುಗಳನ್ನು ಮನೆಯಲ್ಲೇ ಇಟ್ಟಿದ್ದೇನೆ’ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾಗಿ

ಪೊಲೀಸರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry