ಪಾಸ್‌ವರ್ಡ್‌ ಗುಟ್ಟು ಸಂಗಾತಿಯ ಮುಂದೆ ರಟ್ಟು

7

ಪಾಸ್‌ವರ್ಡ್‌ ಗುಟ್ಟು ಸಂಗಾತಿಯ ಮುಂದೆ ರಟ್ಟು

Published:
Updated:
ಪಾಸ್‌ವರ್ಡ್‌ ಗುಟ್ಟು ಸಂಗಾತಿಯ ಮುಂದೆ ರಟ್ಟು

ಮುಂಬೈ: ಶೇ 84ರಷ್ಟು ಭಾರತೀಯರು ತಮ್ಮ ವೈಯಕ್ತಿಕ ಪಾಸ್‌ವರ್ಡ್‌ಗಳನ್ನು ಸಂಗಾತಿಗಳೊಡನೆ ಹಂಚಿಕೊಳ್ಳುತ್ತಾರೆ ಎಂದು ಸೈಬರ್‌ಭದ್ರತಾ ಕಂಪನಿ ಮ್ಯಾಕೆಫೀ ಹೇಳಿದೆ.

ಜನರ ಆನ್‌ಲೈನ್‌ ವರ್ತನೆ ಮತ್ತು ಇದು, ಅವರ ವಾಸ್ತವ ಜಗತ್ತಿನ ಸಂಬಂಧಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಕಂಡುಕೊಳ್ಳಲು ಕಂಪನಿಯು ‘ತ್ರೀಸ್‌ ಕಂಪನಿ: ಲವರ್ಸ್‌, ಫ್ರೆಂಡ್ಸ್‌ ಅಂಡ್‌ ಡಿವೈಸಸ್‌’ ಎಂಬ ಹೆಸರಿನಲ್ಲಿ ಅಧ್ಯಯನ ನಡೆಸಿತ್ತು.

ಸಂಬಂಧಗಳಲ್ಲಿ ಖಾಸಗಿತನ ಅತ್ಯಂತ ಮುಖ್ಯ ಎಂದು ಬಹುಪಾಲು ಮಂದಿ ಅಭಿಪ್ರಾಯಪಟ್ಟರೂ, ತಮ್ಮ ಸಂಗಾತಿಗಳೊಂದಿಗೆ ಅವರು ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ ಎಂದು ಅಧ್ಯಯನ ಹೇಳಿದೆ.

**

600: ಸಮೀಕ್ಷೆಯಲ್ಲಿ ಪಾಲ್ಗೊಂಡವರು

18ಕ್ಕಿಂತ ಹೆಚ್ಚು: ಸಮೀಕ್ಷೆಯಲ್ಲಿ ಪಾಲ್ಗೊಂಡವರ ವಯಸ್ಸು

**

89%: ಸಂಬಂಧದಲ್ಲಿ ಖಾಸಗಿತನ ಅತ್ಯಂತ ಮುಖ್ಯ ಎಂದು ಹೇಳಿದವರ ಪ್ರಮಾಣ

84%: ವೈಯಕ್ತಿಕ ಪಾಸ್‌ವರ್ಡ್‌, ಪಿನ್‌ಗಳನ್ನು ತಮ್ಮ  ಸಂಗಾತಿಗಳೊಡನೆ ಹಂಚಿಕೊಳ್ಳುವವರ ಪ್ರಮಾಣ

**

ಯಾವುದೆಲ್ಲ ಪಾಸ್‌ವರ್ಡ್‌?

ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌, ನೆಟ್‌ಫ್ಲಿಕ್ಸ್‌ನಂತಹ ಆನ್‌ಲೈನ್‌ ವಿಡಿಯೊ ಪ್ರಸಾರ ಮಾಡುವ ವೆಬ್‌ಸೈಟ್‌ಗಳ ಖಾತೆ, ವೈಯಕ್ತಿಕ ಇ–ಮೇಲ್‌ ಖಾತೆ, ಬ್ಯಾಂಕ್‌ ಹಾಗೂ ಹಣಕಾಸು ಸೇವೆ ನೀಡುವ ಸಂಸ್ಥೆಗಳ ವೆಬ್‌ಸೈಟ್ ಖಾತೆಗಳು

**

77%: ತಂತ್ರಜ್ಞಾನದ ಬಳಕೆ ಸಂಬಂಧಗಳನ್ನು ದೂರಮಾಡುತ್ತದೆ ಎಂಬ ಅನಿಸಿಕೆ ವ್ಯಕ್ತಪಡಿಸಿದವರ ಪ್ರಮಾಣ

81%: ಒಟ್ಟಿಗೆ ಸಮಯ ಕಳೆಯುವಾಗ ಮೊಬೈಲ್‌ ಮೇಲೆ ಹೆಚ್ಚು ಗಮನ ನೀಡಿದ್ದಕ್ಕೆ ಸ್ನೇಹಿತ, ಕುಟುಂಬದ ಸದಸ್ಯ ಅಥವಾ ಇತರೆ ಆತ್ಮೀಯ ವ್ಯಕ್ತಿಯೊಂದಿಗೆ ವಾಗ್ವಾದ ನಡೆಸಿದ್ದಾಗಿ ಹೇಳಿಕೊಂಡವರ ಪ್ರಮಾಣ

20%: ಸಂಗಾತಿಯೊಡನೆ ಇದ್ದ ಸಮಯದಲ್ಲಿ ಇಂಟರ್‌ನೆಟ್‌ ಸಂಪರ್ಕ ಹೊಂದಿರುವ ಉಪಕರಣ ಬಳಸದಂತೆ ನಿರ್ಬಂಧ ಹೇರುತ್ತೇವೆ ಎಂದು ಹೇಳಿದವರ ಪ್ರಮಾಣ

**

ಸಂಗಾತಿ ಮೇಲೆ ಬೇಹುಗಾರಿಕೆ!

ಸಂಗಾತಿಗೆ ಅರಿವಿಲ್ಲದಂತೆ ಆತ/ಆಕೆಯ ಸಾಮಾಜಿಕ ಜಾಲತಾಣ ಖಾತೆಗಳು ಅಥವಾ ಇಂಟರ್‌ನೆಟ್‌ ಸಂಪರ್ಕ ಹೊಂದಿರುವ ಉಪಕರಣಗಳನ್ನು ಜಾಲಾಡಿದ್ದಾಗಿ ಶೇ 45 ಮಂದಿ ಒಪ್ಪಿಕೊಂಡಿದ್ದಾರೆ.

**

ಸಾಮಾಜಿಕ ಮಾಧ್ಯಮಗಳಲ್ಲಿ ಸಂಬಂಧ ಬಹಿರಂಗ ಪಡಿಸುವುದು

70% ರಷ್ಟು ಜನರಿಗೆ  ಮುಖ್ಯ

30%ರಷ್ಟು ಜನರಿಗೆ ಮುಖ್ಯವಲ್ಲ

**

ಡೇಟಿಂಗ್‌ ಆ್ಯಪ್‌/ವೆಬ್‌ಸೈಟ್‌ಗಳು ಉತ್ತಮ

ಹೊಸ ಗೆಳೆಯ, ಗೆಳತಿಯರ ಹುಡುಕಾಟಕ್ಕೆ ಸ್ನೇಹಿತರು ಮತ್ತು ಕುಟುಂಬಕ್ಕಿಂತಲೂ ಡೇಟಿಂಗ್‌ ಆ್ಯಪ್‌ ಮತ್ತು ವೆಬ್‌ಸೈಟ್‌ಗಳು ಹೆಚ್ಚು ನೆರವಾಗುತ್ತವೆ ಎಂಬುದು ಅರ್ಧಕ್ಕಿಂತಲೂ (58%) ಹೆಚ್ಚು ಜನರ ಅಭಿಪ್ರಾಯ

**

‘ಜಾಗೃತಿ ಅಗತ್ಯ’

ಇವತ್ತಿನ ಜೀವನ ಶೈಲಿಯಲ್ಲಿ ದಿನ ನಿತ್ಯದ ಚಟುವಟಿಕೆಗಳು ಮತ್ತು ಗ್ರಾಹಕರೊಂದಿಗಿನ ಸಂವಹನಗಳೆಲ್ಲ ಆ್ಯಪ್‌ಗಳು ಮತ್ತು ತಂತ್ರಜ್ಞಾನ ಆಧರಿತವಾಗಿವೆ.  ತಂತ್ರಜ್ಞಾನದ ಅತಿಯಾದ ಅವಲಂಬನೆಯಿಂದಾಗಿ ಗೊತ್ತಿಲ್ಲದ ವ್ಯಕ್ತಿಗಳೊಂದಿಗೆ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳುವ ಪರಿಸ್ಥಿತಿ ಬರಬಹುದು. ಆದರೆ, ಇದರಿಂದಾಗುವ ಪರಿಣಾಮಗಳ ಬಗ್ಗೆ ನಮಗೆ ಅರಿವಿರಬೇಕು ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮ್ಯಾಕೆಫೀ ಎಂಜಿನಿಯರಿಂಗ್‌ ವಿಭಾಗದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವೆಂಕಟ್‌ ಕೃಷ್ಣಾಪುರ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry