ಮಂಗಳವಾರ, ಡಿಸೆಂಬರ್ 10, 2019
26 °C

12ಕ್ಕೆ ರಾಹುಲ್‌ಗೆ ಅದ್ಧೂರಿ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

12ಕ್ಕೆ ರಾಹುಲ್‌ಗೆ ಅದ್ಧೂರಿ ಸ್ವಾಗತ

ಯಾದಗಿರಿ: ಪಕ್ಷದ ಪ್ರಚಾರಕ್ಕೆ ಆಗಮಿಸುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಜಿಲ್ಲೆಯ ಶಹಾಪುರಕ್ಕೆ ಫೆ12ರಂದು ಬರಲಿದ್ದು, ಜಿಲ್ಲಾ ಕಾಂಗ್ರೆಸ್ ಅವರಿಗೆ ಅದ್ಧೂರಿ ಸ್ವಾಗತ ನೀಡಲಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್‌ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ,‘ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಅಲಂಕರಿಸಿದ ಮೇಲೆ ರಾಹುಲ್‌ ಗಾಂಧಿ ಇಡೀ ದೇಶದಲ್ಲಿ ಪಕ್ಷ ಸಂಘಟಿಸುವಲ್ಲಿ ರೋಡ್ ಶೋ ಹಮ್ಮಿಕೊಂಡಿದ್ದಾರೆ. ರಾಜ್ಯದಲ್ಲಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಶೋಡ್‌ ಶೋ ನಡೆಸುವ ಮೂಲಕ ಅಲ್ಲಲ್ಲಿ ಕಾರ್ಯಕರ್ತರ ಸಭೆ ನಡೆಸಿ ಪಕ್ಷದ ಬೆಳವಣಿಗೆ ಕುರಿತು ಚರ್ಚಿಸಲಿದ್ದಾರೆ’ ಎಂದರು.

‘ಮಾಲಕರಡ್ಡಿ ಚುನಾವಣಾ ನಿವೃತ್ತಿ ಕುರಿತಂತೆ ರಾಹುಲ್‌ ಗಾಂಧಿ ಅವರಿಗೆ ವಿಷಯ ಮುಟ್ಟಿಸಿಲ್ಲ. ಅದನ್ನು ಚರ್ಚಿಸಲು ರಾಜ್ಯದಲ್ಲಿ ಕೆಪಿಸಿಸಿ ಪದಾಧಿಕಾರಿಗಳು, ಸಿಎಂ ಸಿದ್ದರಾಮಯ್ಯ ಇದ್ದಾರೆ. ಈ ಕುರಿತು ಚರ್ಚೆಬೇಡ’ ಎಂದು ಹೇಳಿದರು.

‘ಮಾಲಕರಡ್ಡಿ ಅವರ ನಿರ್ಗಮನ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಿರಿಯರಿಗೆ ಸಾತ್ವಿಕ ಸಿಟ್ಟು ಸಹಜವಾಗಿ ಇರುತ್ತದೆ. ಹಾಗಾಗಿ, ಪಕ್ಷದ ಬಗ್ಗೆ ಅವರು ಸಿಟ್ಟು ಹೊರಹಾಕಿದ್ದಾರೆ. ಅದಕ್ಕೆ ಅನಗತ್ಯ ಅರ್ಥ ಕಲ್ಪಿಸುವುದು ಬೇಡ’ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಚನ್ನಾರಡ್ಡಿ ಪಾಟೀಲ ತುನ್ನೂರ, ಶ್ರೀನಿವಾಸರಡ್ಡಿ ಕಂದಕೂರು, ಯುವ ಮುಖಂಡ ರಾಘವೇಂದ್ರ ಮಾನಸಗಲ್, ಜಿಲ್ಲಾ ಘಟಕ ಮಹಿಳಾ ಅಧ್ಯಕ್ಷ ಮಂಜುಳಾ ಗೂಳಿ, ಬಸರಡ್ಡಿ ಮಾಲೀಪಾಟೀಲ, ಮಾಣಿಕರಡ್ಡಿ ಕುರಕುಂದಿ

ಪ್ರತಿಕ್ರಿಯಿಸಿ (+)