ಬುಧವಾರ, ಡಿಸೆಂಬರ್ 11, 2019
22 °C

ತೆಲುಗು ಹಾಸ್ಯನಟ ಗುಂಡು ಹನುಮಂತ ರಾವ್ ನಿಧನ

Published:
Updated:
ತೆಲುಗು ಹಾಸ್ಯನಟ ಗುಂಡು ಹನುಮಂತ ರಾವ್ ನಿಧನ

ಹೈದರಾಬಾದ್‌: ತೆಲುಗು ಚಿತ್ರರಂಗದ ಖ್ಯಾತ ಹಾಸ್ಯನಟ ಗುಂಡು ಹನುಮಂತರಾವ್ (61) ಸೋಮವಾರ ನಿಧನರಾಗಿದ್ದಾರೆ.

ಹಲವು ದಿನಗಳಿಂದ ಹೃದಯ, ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅವರು ಎಸ್‌.ಆರ್‌. ನಗರದ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.

ಸೋಮವಾರ ಬೆಳಿಗ್ಗೆ ತೀವ್ರವಾಗಿ ಅಸ್ವಸ್ಥಗೊಂಡಿದ್ದರು.

400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದು, ಮೂರು ಬಾರಿ ನಂದಿ ಪ್ರಶಸ್ತಿಯನ್ನು ಪಡೆದಿದ್ದಾರೆ. 1987ರಲ್ಲಿ ತೆರೆಕಂಡ ‘ಆಹಾ ನಾ ಪೆಲ್ಲಂಟಾ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪದಾಪರ್ಣೆ ಮಾಡಿದರು.

ಗುಂಡು ಹನುಮಂತ ರಾವ್ ಅವರ ನಿಧನಕ್ಕೆ ತೆಲುಗು ಚಿತ್ರರಂಗದ ಗಣ್ಯರು ಸಂತಾಪ ಸೂಚಿದ್ದಾರೆ.

ಪ್ರತಿಕ್ರಿಯಿಸಿ (+)