ಶಾಲಾ ಆವರಣದಲ್ಲಿ ಬಿಸಿಯೂಟ ತಯಾರಿಕೆ

7
ತಾವರಗೇರಾ: ಬಚನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಶಾಲಾ ಆವರಣದಲ್ಲಿ ಬಿಸಿಯೂಟ ತಯಾರಿಕೆ

Published:
Updated:
ಶಾಲಾ ಆವರಣದಲ್ಲಿ ಬಿಸಿಯೂಟ ತಯಾರಿಕೆ

ತಾವರಗೇರಾ: ‘ಸಮೀಪದ ಬಚನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ವರ್ಷದಿಂದ ವಿದ್ಯಾರ್ಥಿಗಳಿಗೆ ಬಯಲಲ್ಲೇ ಬಿಸಿಯೂಟ ತಯಾರಿಸಿ ನೀಡಲಾಗುತ್ತಿದೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮೆಣೇದಾಳ ಸಿಆರ್‌ಸಿ ವ್ಯಾಪ್ತಿಯಲ್ಲಿ ರುವ ಬಚನಾಳ ಶಾಲೆಯಲ್ಲಿ 143 ವಿದ್ಯಾರ್ಥಿಗಳ ದಾಖಲಾತಿ ಇದೆ. ಆವರಣ ದಲ್ಲಿ ಸುಸಜ್ಜಿತ ಅಡುಗೆ ಕೋಣೆ ಇದ್ದರೂ ಇಲ್ಲದಂತಾಗಿದೆ. ಸರ್ಕಾರ ಅನುದಾನ ನೀಡುತ್ತಿದ್ದರೂ ಅಧಿಕಾರಿಗಳು, ಶಾಲೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ ವರ್ಷಪೂರ್ತಿ ಕಟ್ಟಿಗೆ ಬಳಸಿಯೇ ಬಿಸಿಯೂಟ ತಯಾರಿಸಲಾಗುತ್ತಿದೆ. ಅಡುಗೆ ಮಾಡುವಾಗ ಬೀಸುವ ಗಾಳಿಯಿಂದ ಕಸ, ಮಣ್ಣಿನ ದೂಳು ಅಡುಗೆಯಲ್ಲಿ ಸೇರುತ್ತಿದೆ. ಇದರಿಂದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ವ್ಯಥ್ಯಯವಾಗುತ್ತಿದೆ. ಅಡುಗೆ ತಯಾರಿಕೆಗೆ ಕಟ್ಟಿಗೆ ಬಳಸುವುದರಿಂದ ಶಾಲಾ ಕೊಠಡಿಯ ಒಳಗೆ ಹೊಗೆ ಹರಡುತ್ತದೆ. ಇದರಿಂದ ವಿದ್ಯಾರ್ಥಿಗಳು ಕೆಮ್ಮುತ್ತಾ ಪಾಠ ಕೇಳುವಂತಹ ಪರಿಸ್ಥಿತಿ ಮುಂದುವರೆದಿದೆ.

‘ಶಾಲೆಯಲ್ಲಿ 5 ಜನ ಶಿಕ್ಷಕರ ಅವಶ್ಯವಿದೆ. 3 ಜನ ಶಿಕ್ಷಕರಿದ್ದಾರೆ. ಒಬ್ಬರು ಅತಿಥಿ ಶಿಕ್ಷಕರನ್ನು ಸರ್ಕಾರ ನೇಮಕ ಮಾಡಿದೆ. ಆದರೆ 5 ವರ್ಷಗಳಿಂದ ವಿಜ್ಞಾನ ಬೋಧನೆ ಮಾಡುವ ಶಿಕ್ಷಕರು ಇಲ್ಲ. ವಿದ್ಯಾರ್ಥಿಗಳ ಕಲಿಕೆ ಕುಂಠಿತವಾದರೂ ಶಿಕ್ಷಕರು ಪಾಠ ಮುಗಿಸುತ್ತಿದ್ದಾರೆ. ಪ್ರಭಾರಿ ಮುಖ್ಯಗುರುಗಳೆ ಶಾಲೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಶಾಲೆಯ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಇಲಾಖೆಯ ಮೇಲಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು’ ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.

***

ಸಿಲಿಂಡರ್ ಸರಬರಾಜು ಕೊರತೆ ಇದೆ. ಒಂದು ತಿಂಗಳ ಹಿಂದೆ ಶಾಲೆಗೆ ಸಮರ್ಪಕ ಸಿಲಿಂಡರ್ ಪೂರೈಕೆಗೆ ಮನವಿ ಸಲ್ಲಿಸಲಾಗಿದೆ. ಮಕ್ಕಳಿಗೆ ಸುರಕ್ಷಿತ ಬಿಸಿಯೂಟ ತಯಾರಿಸಲಾಗುವುದು.

ರೇವನಗೌಡ, ಪ್ರಭಾರಿ ಮುಖ್ಯಗುರು, ಬಚನಾಳ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry