‘ಮತ ಬ್ಯಾಂಕ್ ರಾಜಕಾರಣದ ಜಾಯಮಾನ ನನ್ನದಲ್ಲ’

7
ಅಭಿವೃದ್ಧಿಯೆ ಮೂಲ ಮಂತ್ರ, ತಾರತಮ್ಯ ಮಾಡಿಲ್ಲ

‘ಮತ ಬ್ಯಾಂಕ್ ರಾಜಕಾರಣದ ಜಾಯಮಾನ ನನ್ನದಲ್ಲ’

Published:
Updated:

ಕನಕಗಿರಿ: ‘ಕ್ಷೇತ್ರದ ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿ ಹಾಗೂ ಶೋಷಿತರು, ಬಡವರು, ಅಲ್ಪ ಸಂಖ್ಯಾತರ ಸರ್ವಾಂಗೀಣ ಪ್ರಗತಿಗೆ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ’ ಎಂದು ಶಾಸಕ ಶಿವರಾಜ ತಂಗಡಗಿ ತಿಳಿಸಿದರು.

ಸಮೀಪದ ಮುಸಲಾಪುರ ಗ್ರಾಮದಲ್ಲಿ ಪಶು ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಒಣಭೂಮಿ ಹಾಗೂ ನೀರಾವರಿ ಪ್ರದೇಶಗಳೆಂಬ ಭೇದ ಭಾವನೆ ನನ್ನಲ್ಲಿ ಇಲ್ಲ, ಕ್ಷೇತ್ರದ ಅಭಿವೃದ್ಧಿಯೆ ತಮ್ಮ ಮೂಲ ಮಂತ್ರ ಎಂದು ಹೇಳಿದರು.

‘ಓಟು ಬ್ಯಾಂಕ್‌ ರಾಜಕಾರಣ ನನ್ನ ಜಾಯಮಾನವಲ್ಲ. ತಾವು ಈ ರೀತಿ ಎಂದಿಗೂ ಯೋಜಿಸಿಲ್ಲ, ಕಡಿಮೆ ಮತಗಳನ್ನು ಹಾಕಿದ ಗ್ರಾಮದಲ್ಲಿಯೂ ಹುಬ್ಬೇರಿಸುವಂತೆ ಅಭಿವೃದ್ಧಿ ಕೆಲಸ ಮಾಡಿರುವೆ. ಮುಸಲಾಪುರದಿಂದ ಹಾಸಗಲ್‌ ವರೆಗೆ ರಸ್ತೆ ಡಾಂಬರೀಕರಣ ₹87 ಲಕ್ಷ ಬಿಡುಗಡೆಯಾಗಿದ್ದು ಕಾಮಗಾರಿ ನಡೆಯುತ್ತಿದೆ’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹುಸೇನಮ್ಮ ಈಳಿಗೇರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry