ಆತ ದೊಡ್ಡ ಮೋಸಗಾರ, ಮದುವೆಯಾದ ದಿನದಿಂದಲೂ ನನ್ನನ್ನು ಪತ್ನಿಯಾಗಿ ಕಂಡಿಲ್ಲ: ಭಾರತದ ಕ್ರಿಕೆಟಿಗ ಮೊಹಮ್ಮದ್ ಶಮಿ ವಿರುದ್ಧ ಹೆಂಡತಿ ಹಸೀನ್ ಆರೋಪ

ಬುಧವಾರ, ಮಾರ್ಚ್ 20, 2019
26 °C

ಆತ ದೊಡ್ಡ ಮೋಸಗಾರ, ಮದುವೆಯಾದ ದಿನದಿಂದಲೂ ನನ್ನನ್ನು ಪತ್ನಿಯಾಗಿ ಕಂಡಿಲ್ಲ: ಭಾರತದ ಕ್ರಿಕೆಟಿಗ ಮೊಹಮ್ಮದ್ ಶಮಿ ವಿರುದ್ಧ ಹೆಂಡತಿ ಹಸೀನ್ ಆರೋಪ

Published:
Updated:
ಆತ ದೊಡ್ಡ ಮೋಸಗಾರ, ಮದುವೆಯಾದ ದಿನದಿಂದಲೂ ನನ್ನನ್ನು ಪತ್ನಿಯಾಗಿ ಕಂಡಿಲ್ಲ: ಭಾರತದ ಕ್ರಿಕೆಟಿಗ ಮೊಹಮ್ಮದ್ ಶಮಿ ವಿರುದ್ಧ ಹೆಂಡತಿ ಹಸೀನ್ ಆರೋಪ

ನವದೆಹಲಿ: ‘ಅವನು ಮಹಾನ್ ಮೋಸಗಾರ..ಆತ ನನಗೆ ಚಿತ್ರಹಿಂಸೆ ನೀಡಿದ..ನನಗೆ ವಿಚ್ಚೇದನ ನೀಡಲು ಒತ್ತಾಯಿಸುತ್ತಿದ್ದಾನೆ..ಮದುವೆಯಾದ ದಿನದಿಂದಲೂ ನನ್ನನ್ನು ಹೆಂಡತಿಯಾಗಿ ಕಂಡಿಲ್ಲ’...

ಹೀಗೆ ಆರೋಪ ಮಾಡಿದವರು ಭಾರತೀಯ ಕ್ರಿಕೆಟ್ ತಂಡದ ಬೌಲರ್ ಮೊಹಮ್ಮದ್ ಶಮಿ ಅವರ ಪತ್ನಿ ಹಸೀನ್ ಜಹಾನ್. ಇವರು 2014ರಲ್ಲಿ ವಿವಾಹವಾಗಿದ್ದರು.

ನಾಲ್ಕು ವರ್ಷಗಳಿಂದ ಶಮಿಯ ಹಿಂಸೆಯನ್ನು ಸಹಿಸಿಕೊಂಡೆ ಎಂದು ಹೇಳುತ್ತಿರುವ ಹಸೀನ್, ‘ಅವನನ್ನು ನನ್ನವನಾಗಿ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದೆ. ಆದರೆ ಅವರು ಇದುವರೆಗೂ ನನ್ನನ್ನು ಪತ್ನಿಯ ರೀತಿ ಉಪಚರಿಸಿಲ್ಲ. ಆತ ದೊಡ್ಡ ಮೋಸಗಾರ. ನನ್ನ ಕೊನೆಯ ಉಸಿರಿನವರೆಗೂ ನಾನು ಅವರಿಗೆ ವಿಚ್ಛೇದನ ನೀಡುವುದಿಲ್ಲ. ನನ್ನ ಹತ್ತಿರ ಎಲ್ಲಾ ಸಾಕ್ಷ್ಯಗಳಿವೆ. ಸದ್ಯದಲ್ಲೇ ನ್ಯಾಯಲಯಕ್ಕೆ ಸಲ್ಲಿಸುತ್ತೇನೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಶಮಿ ನನಗೆ ಜೀವಬೆದರಿಕೆ ಹಾಕಿದ್ದಾರೆ. ಅವರು ವಿವಾಹೇತರ ಸಂಬಂಧ ಹೊಂದಿದ್ದಾರೆ. ಅಲ್ಲದೇ ಅವರ ತಾಯಿ ಮತ್ತು ಸಹೋದರ ನನ್ನನ್ನು ನಿಂದಿಸಿದ್ದಾರೆ’ ಎಂದು ಹಸೀನ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಫೋಟೊ ಸಮೇತ ಬರೆದುಕೊಂಡಿದ್ದರು.

‘ನನ್ನ ವೈಯಕ್ತಿಕ ಜೀವನದ ವಿಚಾರವಾಗಿ ಹಬ್ಬಿರುವ ಸುದ್ದಿ ಸಂಪೂರ್ಣವಾಗಿ ಸುಳ್ಳು. ನನ್ನ ಹೆಸರಿಗೆ ಮಸಿ ಬಳಿಯಲು ಹಾಗೂ ನನ್ನ ಆಟಕ್ಕೆ ಅಡ್ಡಿ ಉಂಟು ಮಾಡಲು ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಶಮಿ ಟ್ವಿಟ್ ಮಾಡಿದ್ದಾರೆ.

New Delhi: Mohammad Shami's wife on Wednesday alleged that the India cricketer is guilty of domestic violence, that he has been torturing her and that 'he is a big flirt.' Hasin Jahan charged the 27-year-old cricketer for never treating him as his wife since they got married in 2014.

Speaking to reporters, Jahan said that she has endured domestic violence for which she will now take legal action. "I have done everything he (Shami) wanted me to do. He has tortured me and has not treated me like his wife. He is a big flirt," she said. "I am not going to divorce him till my last breath and have all the evidence, will soon drag him to the court." Earlier in the day, a Facebook post detailed that Shami had even threatened to kill Jahan, although the authenticity of the social media account could not be ascertained. The post nonetheless went on to say that the cricketer's mother and brother used to abuse Jahan, and that Shami had physical relations with other women. Snapshots of the said women were also attached with the post.

Shami, who had made his international debut in an ODI against Pakistan in 2013, reacted sharply and rubbished the charges as a bid to ruin his cricketing career. He took to social media, although before Jahan came out in person to level the charges, and said that the reports related to his personal life are false.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry