‘ವೋ ಕೌನ್‌ ಥೀ’ ರಿಮೇಕ್‌ನಲ್ಲಿ ಶಾಹಿದ್‌

7

‘ವೋ ಕೌನ್‌ ಥೀ’ ರಿಮೇಕ್‌ನಲ್ಲಿ ಶಾಹಿದ್‌

Published:
Updated:
‘ವೋ ಕೌನ್‌ ಥೀ’ ರಿಮೇಕ್‌ನಲ್ಲಿ ಶಾಹಿದ್‌

ಕ್ರಿಆರ್ಜ್‌ ಎಂಟರ್‌ಟೇನ್‌ಮೆಂಟ್‌ನ ಪ್ರೇರಣಾ ಅರೋರಾ 1964ರಲ್ಲಿ ತೆರೆಕಂಡ ಕ್ಲಾಸಿಕ್‌ ಥ್ರಿಲ್ಲರ್‌ ಸಿನಿಮಾ ‘ವೋ ಕೌನ್‌ ಥೀ’ ಚಿತ್ರದ ಮರುನಿರ್ಮಾಣ ಹಕ್ಕು ಪಡೆದಿದ್ದಾರೆ. ನಟ ಮನೋಜ್‌ ಕುಮಾರ್‌ ಅವರಿಗೆ ಅರ್ಪಿಸಲಿರುವ ಈ ಚಿತ್ರದಲ್ಲಿ ಶಾಹಿದ್‌ ಕಪೂರ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸಿನಿಲೋಕ ಮಾತನಾಡಿಕೊಳ್ಳುತ್ತಿದೆ.

ಈಗಾಗಲೇ ‘ಲಗ್‌ ಜಾ ಗಲೇ’ ಹಾಗೂ ‘ನೇನಾ ಬರಸೆ’ ಹಾಡುಗಳ ಹಕ್ಕುಗಳನ್ನೂ ಪಡೆದುಕೊಳ್ಳಲಾಗಿದ್ದು, ನಟನ ಪಾತ್ರಕ್ಕೆ ಪ್ರೇರಣಾ ಅವರ ಮೊದಲ ಆಯ್ಕೆ ಶಾಹಿದ್‌ ಕಪೂರ್‌ ಆಗಿದ್ದಾರೆ ಎನ್ನಲಾಗುತ್ತಿದೆ. ಈ ವಿಷಯದಲ್ಲಿ ಗುಟ್ಟು ಬಿಟ್ಟುಕೊಡದ ಪ್ರೇರಣಾ ‘ಈಗಷ್ಟೇ ಸಿನಿಮಾ ರಿಮೇಕ್‌ ಮಾಡುವ ಬಗೆಗೆ ನಿರ್ಧರಿಸಿದ್ದೇವೆ. ನಟ ಯಾರು ಎಂಬ ಬಗ್ಗೆ ಇಷ್ಟು ಬೇಗ ಚರ್ಚಿಸುವುದು ಸಾಧ್ಯವಿಲ್ಲ. ಮಾತುಕತೆ ನಡೆದ ಮೇಲೆಯೇ ಹೇಳಬಲ್ಲೆ’ ಎಂದಿದ್ದಾರೆ.

ಲತಾ ಮಂಗೇಶ್ಕರ್‌ ಹಾಡಿರುವ ಎರಡು ಹಾಡುಗಳನ್ನು ಬಳಸಿಕೊಳ್ಳಲಾಗುತ್ತಿದ್ದು ಮೂಲ ಧ್ವನಿಯಲ್ಲೇ ಬಳಸಿಕೊಳ್ಳುವ ಯೋಚನೆ ಇದೆ. ಈ ಹಾಡಿನಲ್ಲಿ ಐಶ್ವರ್ಯಾ ರೈ ಬಚ್ಚನ್‌ ಇಲ್ಲವೇ ದೀಪಿಕಾ ಪಡುಕೋಣೆ ಅವರನ್ನು ನೋಡಲು ಬಯಸುತ್ತೇನೆ ಎಂದು ಲತಾ ಮಂಗೇಶ್ಕರ್‌ ಪ್ರತಿಕ್ರಿಯಿಸಿದ್ದಾರಂತೆ.

ಒಟ್ಟಿನಲ್ಲಿ ತೆರೆ ಮೇಲೆ ಕಾಣಿಸಿ ಕೊಳ್ಳುವ ನಟ ನಟಿಯರು ಯಾರು ಎಂಬುದನ್ನು ಮಾತ್ರ ಚಿತ್ರತಂಡ ಬಹಿರಂಗಪಡಿಸಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry