ಕೊಪ್ಪಳ ಎಸ್‌ಪಿ ವರ್ಗಾವಣೆಗೆ ಸಿಎಟಿ ತಡೆ

7
ಸಿಎಟಿ ಮೊರೆಹೋದ ಡಾ.ಅನೂಪ್‌ ಎ.ಶೆಟ್ಟಿ

ಕೊಪ್ಪಳ ಎಸ್‌ಪಿ ವರ್ಗಾವಣೆಗೆ ಸಿಎಟಿ ತಡೆ

Published:
Updated:
ಕೊಪ್ಪಳ ಎಸ್‌ಪಿ ವರ್ಗಾವಣೆಗೆ ಸಿಎಟಿ ತಡೆ

ಕೊಪ್ಪಳ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅನೂಪ್‌ ಎ.ಶೆಟ್ಟಿ ಅವರ ವರ್ಗಾವಣೆಗೆ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ತಡೆ ನೀಡಿದ್ದು, ಮಾ.27ರಂದು ವಿಚಾರಣೆ ನಿಗದಿಪಡಿಸಿದೆ.

‘ವರ್ಗಾವಣೆ ಸಾಮಾನ್ಯ ಪ್ರಕ್ರಿಯೆ. ಆದರೆ ಒಂದು ವರ್ಷಕ್ಕೂ ಮುನ್ನ ದಿಢೀರ್‌ ವರ್ಗಾವಣೆ ಏಕೆ ಎಂದಷ್ಟೇ ನಾನು ಸಿಎಟಿಯಲ್ಲಿ ಪ್ರಶ್ನಿಸಿದ್ದೇನೆ’ ಎಂದು ಡಾ. ಅನೂಪ್‌ ಪ್ರತಿಕ್ರಿಯಿಸಿದರು.

ಸರ್ಕಾರ ಇವರನ್ನು ರಾಜ್ಯ ಗುಪ್ತದಳದ ವರಿಷ್ಠಾಧಿಕಾರಿ ಹುದ್ದೆಗೆ ವರ್ಗಾಯಿಸಿತ್ತು.

ಅನೂಪ್‌ ಪತ್ನಿ ನಿಶಾ ಜೇಮ್ಸ್‌ ಅವರು ಎರಡು ತಿಂಗಳ ಹಿಂದಷ್ಟೆ ಜಿಲ್ಲೆಯ ಮುನಿರಾಬಾದ್‌ನ ಐಆರ್‌ಬಿ ಕಮಾಂಡೆಂಟ್‌ ಆಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry