ಹಾಕಿಂಗ್ ‘ಬಹುಕಾಲದ ಗೆಳೆಯ’

7

ಹಾಕಿಂಗ್ ‘ಬಹುಕಾಲದ ಗೆಳೆಯ’

Published:
Updated:
ಹಾಕಿಂಗ್ ‘ಬಹುಕಾಲದ ಗೆಳೆಯ’

ವಾಷಿಂಗ್ಟನ್: ‘ಸಂಕೀರ್ಣವಾದ ಭೌತವಿಜ್ಞಾನವನ್ನು ಜನಸಾಮಾನ್ಯರಿಗೆ ಅರ್ಥಮಾಡಿಸುತ್ತಿದ್ದ ವಿಜ್ಞಾನಿ ಸ್ಟೀಫನ್ ಹಾಕಿಂಗ್, ಅವರು ವಿಶ್ವದಾದ್ಯಂತ ಎಲ್ಲರ ಸ್ಫೂರ್ತಿಯ ಚಿಲುಮೆಯಾಗಿದ್ದರು. ಇವರು ನಮ್ಮ ‘ಬಹುಕಾಲದ ಗೆಳೆಯ’ ಎಂದು ಹೇಳಿರುವ ನಾಸಾ, ಹಾಕಿಂಗ್ ಅವರಿಗೆ ಗೌರವ ಸಲ್ಲಿಸಿದೆ.

‘ಅತ್ಯಂತ ಪ್ರಭಾವಿ ಹಾಗೂ ದೊಡ್ಡ ಮನುಷ್ಯನನ್ನು ನಾವು ಕಳೆದುಕೊಂಡಿದ್ದೇವೆ. ಹಾಕಿಂಗ್ ಅವರ ಕುಟುಂಬ ಹಾಗೂ ಸ್ನೇಹಿತರಿಗೆ ಸಾಂತ್ವನ ಹೇಳ ಬಯಸುತ್ತೇವೆ. ನಾಸಾಗೆ ದೀರ್ಘಾವಧಿ ಗೆಳೆಯರಾಗಿದ್ದ ಹಾಕಿಂಗ್ ಉತ್ಸಾಹಭರಿತ ಸಂವಹನಕಾರರಾಗಿದ್ದರು. ತಾವು ಕೈಗೊಳ್ಳುವ ಅನ್ವೇಷಣೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯುಸುತ್ತಿದ್ದರು’ ಎಂದು ನಾಸಾದ ನಿರ್ವಾಹಕ ರಾಬರ್ಟ್‌ ಲೈಟ್‌ಫೂಟ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry