‘ರಾಷ್ಟ್ರಗೀತೆ: ಸಿಂಧ್ ಬಿಡಿ, ಈಶಾನ್ಯ ಸೇರಿಸಿ’

7

‘ರಾಷ್ಟ್ರಗೀತೆ: ಸಿಂಧ್ ಬಿಡಿ, ಈಶಾನ್ಯ ಸೇರಿಸಿ’

Published:
Updated:
‘ರಾಷ್ಟ್ರಗೀತೆ: ಸಿಂಧ್ ಬಿಡಿ, ಈಶಾನ್ಯ ಸೇರಿಸಿ’

ನವದೆಹಲಿ (ಪಿಟಿಐ): ರಾಷ್ಟ್ರಗೀತೆಯಲ್ಲಿರುವ ‘ಸಿಂಧ್’ ಎಂಬ ಪದವನ್ನು ಕೈಬಿಡಬೇಕು ಮತ್ತು ‘ಈಶಾನ್ಯ’ ಎಂಬ ಪದವನ್ನು ಸೇರಿಸಬೇಕು ಎಂದು ಕಾಂಗ್ರೆಸ್‌ ಸಂಸದ ರಿಪುನ್ ಬೋರಾ ರಾಜ್ಯಸಭೆಯಲ್ಲಿ ಶುಕ್ರವಾರ ಖಾಸಗಿ ಸದಸ್ಯರ ಮಸೂದೆ ಮಂಡಿಸಿದ್ದಾರೆ.

‘1950ರಲ್ಲಿ ರಾಷ್ಟ್ರಗೀತೆಯನ್ನು ಅಂಗೀಕರಿಸುವಾಗ ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್, ಅದಕ್ಕೆ ತಿದ್ದುಪಡಿ ತರಬಹುದು ಎಂದು ಹೇಳಿದ್ದರು. ದೇಶದ ಭಾಗವಾಗಿರುವ ಈಶಾನ್ಯ ಭಾರತದ ಉಲ್ಲೇಖ ರಾಷ್ಟ್ರಗೀತೆಯಲ್ಲಿಲ್ಲ.

ಆದರೆ ಇಂದು ಪಾಕಿಸ್ತಾನದಲ್ಲಿರುವ ಸಿಂಧ್‌ನ ಹೆಸರಿದೆ. ಶತ್ರು ದೇಶದ ಸ್ಥಳವನ್ನು ಹಾಡಿ–ಹೊಗಳುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry