ಬಿಜೆಪಿಯಿಂದ ದೂರವಿದ್ದಿದ್ದರೇ 15 ಸ್ಥಾನ ಹೆಚ್ಚು ಗೆಲ್ಲುತ್ತಿದ್ದೆವು : ಚಂದ್ರಬಾಬು ನಾಯ್ಡು

7

ಬಿಜೆಪಿಯಿಂದ ದೂರವಿದ್ದಿದ್ದರೇ 15 ಸ್ಥಾನ ಹೆಚ್ಚು ಗೆಲ್ಲುತ್ತಿದ್ದೆವು : ಚಂದ್ರಬಾಬು ನಾಯ್ಡು

Published:
Updated:
ಬಿಜೆಪಿಯಿಂದ ದೂರವಿದ್ದಿದ್ದರೇ 15 ಸ್ಥಾನ ಹೆಚ್ಚು ಗೆಲ್ಲುತ್ತಿದ್ದೆವು : ಚಂದ್ರಬಾಬು ನಾಯ್ಡು

ಗುಂಟೂರು(ಆಂಧ್ರ ಪ್ರದೇಶ): ‘ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದೇ ಈ ಹಿಂದಿನ ಲೋಕಸಭಾ ಚುನಾವಣೆ ಎದುರಿಸಿದ್ದರೇ, ಇನ್ನೂ 15 ಸ್ಥಾನಗಳನ್ನು ಹೆಚ್ಚು ಗೆಲ್ಲುತ್ತಿದ್ದೆವು’ ಎಂದು ತೆಲುಗು ದೇಶಂ ಪಕ್ಷದ(ಟಿಡಿಪಿ) ಅಧ್ಯಕ್ಷ ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಕುರಿತು ಕೇಂದ್ರದ ಎನ್‌ಡಿಎ ಸರ್ಕಾರ ಮತ್ತು ಟಿಡಿಪಿ ನಡುವೆ ಗುದ್ದಾಟ ನಡೆಯುತ್ತಿರುವ ಇಂದಿನ ಸಂದರ್ಭದಲ್ಲಿ ಈ ಹೇಳಿಕೆಯನ್ನು ನಾಯ್ಡು ನೀಡಿದ್ದಾರೆ.

‘ರಾಜಕೀಯ ಲಾಭಕ್ಕಾಗಿ ನಾವು ಬಿಜೆಪಿಯೊಂದಿಗೆ ಕೈಜೋಡಿಸಲಿಲ್ಲ. ಬದಲಾಗಿ ರಾಜ್ಯದ ಅಭಿವೃದ್ಧಿಗಾಗಿ ಅವರೊಂದಿಗೆ ಹೋದೆವು. ಬಿಜೆಪಿಯಿಂದ ದೂರವಿದ್ದಿದ್ದರೆ, ಇನ್ನೂ 15 ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತಿದ್ದೆವು. ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ವಿಚಾರದಲ್ಲಿ ಬಿಜೆಪಿ ನಮಗೆ ಮೋಸ ಮಾಡಿದೆ’ ಎಂದು ಪಕ್ಷದ 37ನೇ ವರ್ಷದ ಸ್ಥಾಪನಾ ದಿನದ ಭಾಷಣದಲ್ಲಿ ಆರೋಪಿಸಿದರು.

‘ಈಶಾನ್ಯ ಭಾರತದ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡುವ ಬಿಜೆಪಿ, ನಮ್ಮ ಅಹವಾಲನ್ನು ತಿರಸ್ಕರಿಸಿದೆ. ಆ ಸ್ಥಾನ ಪಡೆಯುವುದು ನಮ್ಮ ಹಕ್ಕು.  ಈ ಕುರಿತು ಕೇಂದ್ರ ಸರ್ಕಾರ ಸುಳ್ಳುಗಳನ್ನು ಹರಡುತ್ತಿದೆ’ ಎಂದು ನಾಯ್ಡು ಹರಿಹಾಯ್ದರು. 

ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡದೇ, ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿದ ಟಿಡಿಪಿ, ಎನ್‌ಡಿಎ ಮೈತ್ರಿಕೂಟದಿಂದ  ಇತ್ತೀಚೆಗೆ ಹೊರಬಂದಿದೆ. ಕೇಂದ್ರ ಸರ್ಕಾರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಟಿಡಿಪಿ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷಗಳು ಲೋಕಸಭಾ ಕಾರ್ಯದರ್ಶಿಗೆ ಪತ್ರ ಬರೆದಿದ್ದವು. ವಿಶೇಷ ಸ್ಥಾನಮಾನಕ್ಕಾಗಿ ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದ ಸಂಸದರು ಮಂಗಳವಾರ ಘೋಷಿಸಿದ್ದಾರೆ. ಟಿಡಿಪಿ ಸಂಸದರೂ ರಾಜೀನಾಮೆ ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

*********************************************************************************************************

Would've won 15 more seats sans BJP alliance: Chandrababu NaiduGuntur (Andhra Pradesh) [India], Mar. 30 (ANI): Amid the ongoing tussle between the Bharatiya Janata Party (BJP) and Telugu Desam Party (TDP) regarding special status for Andhra Pradesh, Chief Minister N Chandrababu Naidu claimed that if his party had not allied with the former, they would have won 15 more seats.

"Post bifurcation, we had tied up with the BJP. It was not for political gain, but solely with the intention of development. Had we not allied with the BJP, we would have won 15 more seats. They have cheated us on the special status front," Naidu said at the TDP's 37th formation day celebrations here on Thursday.

The TDP chief also accused the Centre of "spreading lies" regarding the quashing of the special category status for states.

"They (BJP) said the special category status is quashed. But even now, its benefits are being given to North-Eastern states. Then why are they not giving it to us? It is our right. The Centre is spreading lies," he said.

On March 16, the TDP reached a deadlock with the BJP over the issue of granting 'special category status' to Andhra Pradesh, which ultimately forced the party to quit the National Democratic Alliance (NDA) coalition.

The TDP and YSR Congress Party (YSRCP) also wrote to the Lok Sabha Secretary-General for moving a motion on 'No-Confidence in the Council of Ministers' in the House.

On Tuesday, the YSRCP announced that their MPs would resign from Lok Sabha and asked the TDP MPs to follow the suit over the issue of special status. (ANI)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry