ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌ 3ರಂದು ರಷ್ಯಾ ಪ್ರವಾಸ ಕೈಗೊಳ್ಳಲಿರುವ ರಕ್ಷಣಾ ಸಚಿವೆ

Last Updated 31 ಮಾರ್ಚ್ 2018, 11:50 IST
ಅಕ್ಷರ ಗಾತ್ರ

ಮಾಸ್ಕೋ: ಅಂತರರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಮುಂದಿನ ವಾರ ಇಲ್ಲಿ ನಡೆಯಲಿರುವ 7ನೇ ಮಾಸ್ಕೋ ಸಮಾವೇಶದಲ್ಲಿ ಪಾಲ್ಗೊಳ್ಳಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರಷ್ಯಾ ಪ್ರವಾಸ ಕೈಗೊಳ್ಳಲಿದ್ದಾರೆ.

ಏಪ್ರಿಲ್‌ 3 ರಿಂದ 5ರ ವರೆಗೆ ಸೀತಾರಾಮನ್‌ ಪ್ರವಾಸ ಕೈಗೊಳ್ಳಲಿದ್ದಾರೆ. ರಕ್ಷಣಾ ಸಚಿವೆಯಾದ ಬಳಿಕ ಅವರು ರಷ್ಯಾ ದೇಶಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ ಎಂದು ಭಾರತ ರಾಯಭಾರ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿವೆ.

‘ಈ ಭೇಟಿಯು ಭಾರತ ಮತ್ತು ರಷ್ಯಾ ನಡುವಣ ಉನ್ನತ ಮಟ್ಟದ ವಿನಿಮಯಗಳ ಸಂಪ್ರದಾಯವನ್ನು ಕಾಯ್ದುಕೊಳ್ಳಲಿದ್ದು, ಮಿಲಿಟರಿ ತಂತ್ರಜ್ಞಾನದ ಜೊತೆಗೆ ಉಭಯ ದೇಶಗಳ ಸಾಂಪ್ರದಾಯಿಕ ಮತ್ತು ಸ್ನೇಹ ಸಂಬಂಧದ ಬಲವರ್ಧನೆಗೂ ಸಹಕಾರಿಯಾಗಲಿದೆ’ ಎಂದೂ ಉಲ್ಲೇಖಿಸಲಾಗಿದೆ.

ಭೇಟಿ ವೇಳೆ ರಷ್ಯಾ ಸೇನೆ ಮುಖ್ಯಸ್ಥ ಸೆರ್ಗೈ ಶೋಯ್ಗು ಸೇರಿದಂತೆ ಹಲವು ಗಣ್ಯರೊಂದಿಗೆ ರಕ್ಷಣಾ ಸಚಿವೆ ಮಾತುಕತೆ ನಡೆಸಲಿದ್ದಾರೆ.

**

Defence Minister Nirmala Sitharaman ​to visit Russia on April 3

MOSCOW: Defence Minister Nirmala Sitharaman will be travelling to Russia next week to attend the seventh Moscow Conference on International Security here.

This will be her first visit to Russia in her capacity as the Defence Minister.

During her three-day tour, between April 3 and 5, she will participate in the VII Moscow Conference on International Security, according to a statement from Indian Embassy here.

Sitharaman will also meet her Russian counterpart Army General Sergei Shoigu, and other senior leaders, it said.

"The visit is in keeping with the tradition of high level exchanges between India and Russia.

"It will provide an opportunity to reinforce the traditional warm and friendly relations that exists between the two countries with particular reference to military technical cooperation," the statement said.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT