ಭಾನುವಾರ, ಡಿಸೆಂಬರ್ 15, 2019
19 °C

ಫ್ರೆಂಚ್‌ ಲೀಗ್‌ ಕಪ್‌ ಫುಟ್‌ಬಾಲ್‌ ಟೂರ್ನಿ: ಪ್ಯಾರಿಸ್‌ ಸೇಂಟ್‌ ಜರ್ಮೈನ್‌ಗೆ ಪ್ರಶಸ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

ಫ್ರೆಂಚ್‌ ಲೀಗ್‌ ಕಪ್‌ ಫುಟ್‌ಬಾಲ್‌ ಟೂರ್ನಿ: ಪ್ಯಾರಿಸ್‌ ಸೇಂಟ್‌ ಜರ್ಮೈನ್‌ಗೆ ಪ್ರಶಸ್ತಿ

ಬೋರ್ಡವ್ (ಎಎಫ್‌ಪಿ): ಎಡಿನ್‌ಸನ್‌ ಕ್ಯಾವನಿ ಗಳಿಸಿದ ಎರಡು ಗೋಲುಗಳ ನೆರವಿನಿಂದ ಪ್ಯಾರಿಸ್‌ ಸೇಂಟ್‌ ಜರ್ಮೈನ್‌ (ಪಿಎಸ್‌ಜಿ) ತಂಡ ಫ್ರೆಂಚ್‌ ಲೀಗ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ‍ಪ್ರಶಸ್ತಿ ಜಯಿಸಿದೆ.

ಮ್ಯಾಟ್‌ಮಟ್‌ ಅಟ್ಲಾಂಟಿಕ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್‌ ನಲ್ಲಿ ಪ್ಯಾರಿಸ್ ಸೇಂಟ್‌ ಜರ್ಮೈನ್‌ 3–0 ಗೋಲುಗಳಿಂದ ಮೊನ್ಯಾಕೊ ತಂಡವನ್ನು ಸೋಲಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಸತತ ಐದನೇ ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿತು.

ಪ್ಯಾರಿಸ್‌ ಸೇಂಟ್‌ ತಂಡ ಆರಂಭದಿಂದಲೇ ವೇಗದ ಆಟ ಆಡಿತು. ಎಂಟನೇ ನಿಮಿಷದಲ್ಲಿ ತಂಡಕ್ಕೆ ಪೆನಾಲ್ಟಿ ಕಾರ್ನರ್‌ ಸಿಕ್ಕಿತು. ಈ ಅವಕಾಶದಲ್ಲಿ ಉರುಗ್ವೆಯ ಆಟಗಾರ ಎಡಿನ್‌ಸನ್‌ ಕ್ಯಾವನಿ ಚೆಂಡನ್ನು ಗುರಿ ತಲುಪಿಸಿದರು. 21ನೇ ನಿಮಿಷದಲ್ಲಿ ಏಂಜಲ್‌ ಡಿ ಮರಿಯಾ ತಂಡದ ಮುನ್ನಡೆ ಹೆಚ್ಚಿಸಿ ದರು. ಸಹ ಆಟಗಾರ ತಮ್ಮತ್ತ ಒದ್ದ ಚೆಂಡನ್ನು ಚಾಕಚಕ್ಯತೆಯಿಂದ ಗುರಿ ಸೇರಿಸಿದ ಅವರು ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳ ಮೆಚ್ಚುಗೆ ಗಳಿಸಿ ದರು. ನಂತರ ಮೊನ್ಯಾಕೊ ತಂಡ ಸಮ ಬಲದ ಗೋಲು ದಾಖಲಿಸಲು ಸಾಕಷ್ಟು ಪ್ರಯತ್ನಿಸಿತು. ಈ ತಂಡದ ಆಟಗಾರರಿಗೆ  ಸೇಂಟ್‌ ಜರ್ಮೈನ್‌ ತಂಡದ ರಕ್ಷಣಾಕೋಟೆ ಭೇದಿಸಲು ಆಗಲಿಲ್ಲ.

2–0 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ಪಿಎಸ್‌ಜಿ ತಂಡ ದ್ವಿತೀಯಾರ್ಧದಲ್ಲೂ ಮಿಂಚಿತು. 85ನೇ ನಿಮಿಷದಲ್ಲಿ ಎಡಿನ್‌ಸನ್‌ ಮತ್ತೊಮ್ಮೆ ಕಾಲ್ಚಳಕ ತೋರಿದರು. ಬಳಿಕದ ಅವಧಿಯಲ್ಲಿ ಎಚ್ಚರಿಕೆಯ ಆಟ ಆಡಿದ ಈ ತಂಡ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದಿತು.

ಪ್ರತಿಕ್ರಿಯಿಸಿ (+)