ಎನ್‌ಐಎ ‘ವಾಂಟೆಡ್‌’ ಪಟ್ಟಿಯಲ್ಲಿ ಪಾಕಿಸ್ತಾನದ ಮಾಜಿ ರಾಜತಾಂತ್ರಿಕ

ಭಾನುವಾರ, ಮಾರ್ಚ್ 24, 2019
33 °C

ಎನ್‌ಐಎ ‘ವಾಂಟೆಡ್‌’ ಪಟ್ಟಿಯಲ್ಲಿ ಪಾಕಿಸ್ತಾನದ ಮಾಜಿ ರಾಜತಾಂತ್ರಿಕ

Published:
Updated:
ಎನ್‌ಐಎ ‘ವಾಂಟೆಡ್‌’ ಪಟ್ಟಿಯಲ್ಲಿ ಪಾಕಿಸ್ತಾನದ ಮಾಜಿ ರಾಜತಾಂತ್ರಿಕ

ನವದೆಹಲಿ: ರಾಷ್ಟ್ರೀಯ ತನಿಖಾ ದಳ(ಎನ್ಐಎ) ‘ವಾಂಟೆಡ್’ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಒಬ್ಬರ ಹೆಸರನ್ನು ಸೇರಿಸಿದೆ.

ಶ್ರೀಲಂಕಾದಲ್ಲಿ 2009–2016ರಲ್ಲಿ ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಅಮಿರ್ ಝುಬೈರ್ ಸಿದ್ದಿಕಿಯನ್ನು ಎನ್‌ಐಎ ಬೇಕಾಗಿರುವವರ ಪಟ್ಟಿಯಲ್ಲಿ ಸೇರಿಸಿ, ಇವರ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ಕೋರಿದೆ.

ಸಿದ್ದಿಕಿ ಅವರನ್ನು ಬೇಕಾಗಿರುವವರ ಪಟ್ಟಿಗೆ ಸೇರಿಸಿರುವ ಎನ್ಐಎ ಪಾಕಿಸ್ತಾನ ಅಧಿಕಾರಿಗಳ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ಇಂಟರ್ ಪೋಲ್ ಬಳಿ ಮನವಿ ಮಾಡಿಕೊಂಡಿದೆ.

2014ರಲ್ಲಿ ದಕ್ಷಿಣ ಭಾರತದ ಸೇನೆ ಮತ್ತು ನೌಕಾಪಡೆ ಕಮಾಂಡ್‌ಗಳ ಪಕ್ಕದಲ್ಲಿರುವ ಅಮೆರಿಕ ಮತ್ತು ಇಸ್ರೇಲ್ ದೂತವಾಸ ಕಚೇರಿಗಳ ಮೇಲೆ 26/11ರ ಮಾದರಿಯ ಭಯೋತ್ಪಾದಕ ದಾಳಿಗೆ ಸಂಚುಮಾಡಿದ್ದ ಇಬ್ಬರು ಪಾಕಿಸ್ತಾನ ಅಧಿಕಾರಿಗಳ ಜತೆ ಸಿದ್ದಿಕಿ ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ವರದಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry