ಇದು ಬೆಕ್ಕುಗಳದೇ ಊರು!

ಬುಧವಾರ, ಮಾರ್ಚ್ 20, 2019
31 °C

ಇದು ಬೆಕ್ಕುಗಳದೇ ಊರು!

Published:
Updated:
ಇದು ಬೆಕ್ಕುಗಳದೇ ಊರು!

ಈ ಊರಲ್ಲಿ ಸುತ್ತಾಡುವಾಗ ಎಷ್ಟು ಜನರು ಎದುರಾಗುತ್ತಾರೋ ಗೊತ್ತಿಲ್ಲ. ಆದರೆ ಹೆಜ್ಜೆ ಇಟ್ಟಲ್ಲೆಲ್ಲಾ ಬೆಕ್ಕುಗಳು ಸಿಗುತ್ತಲೇ ಇರುತ್ತವೆ. ಹಾಗಂತ ‘ಹೋಗಾಚೆ’ ಎಂದು ಈ ಬೆಕ್ಕುಗಳಿಗೆ ಹೊಡೆಯುವ ಅಥವಾ ನೋವು ಮಾಡುವ ಹಾಗೂ ಇಲ್ಲ.

ದಕ್ಷಿಣ ಜಪಾನ್‌ನ ಧ್ವೀಪ ಓಶಿಮಾದಲ್ಲಿ ಬೆಕ್ಕುಗಳದೇ ಕಾರುಬಾರು. ಬೆಕ್ಕುಗಳಿಂದಲೇ ಖ್ಯಾತವಾಗಿರುವ ಈ ಊರು ಪ್ರವಾಸಿಗರ ನೆಚ್ಚಿನ ಊರು ಆಗಿದೆ. ಈ ಧ್ವೀಪದಲ್ಲಿ ಒಬ್ಬ ಮನುಷ್ಯನಿಗೆ ಆರರಂತೆ ಬೆಕ್ಕುಗಳಿವೆ. ಈ ದ್ವೀಪದಲ್ಲಿರುವ ಮನುಷ್ಯರ ಸಂಖ್ಯೆ 100 ಆದರೆ ಬೆಕ್ಕುಗಳ ಸಂಖ್ಯೆ 1,000ಕ್ಕೂ ಹೆಚ್ಚು. ಮೀನುಗಾರಿಕೆ ಪ್ರಮುಖ ಕಸುಬು ಆಗಿರುವ ಈ ಊರಿನಲ್ಲಿ ಬೆಕ್ಕುಗಳೇ ಪ್ರಮುಖ ಆಕರ್ಷಣೆ. ಹಾಗಾಗಿ ಇಲ್ಲಿ ಮನೆಗಳಲ್ಲಿ ಬೆಕ್ಕುಗಳನ್ನು ಇಟ್ಟುಕೊಳ್ಳುವುದಿಲ್ಲ. ಬೆಕ್ಕುಗಳಿಗೆ ರೈಸ್‌ ಬಾಲ್‌, ಬೇಯಿಸಿದ ಆಲೂಗಡ್ಡೆಗಳನ್ನು ಮೂರು ಹೊತ್ತು ರಸ್ತೆಬದಿಗಳಲ್ಲಿ ಹಂಚಲಾಗುತ್ತದೆ. ಸಮುದ್ರ ಕಿನಾರೆ, ರಸ್ತೆ ಹೀಗೆ ಎಲ್ಲಾ ಕಡೆ ಈ ಬೆಕ್ಕುಗಳು ಇದ್ದೇ ಇರುತ್ತವೆ. ಎಲ್ಲೆಡೆಗಳಲ್ಲಿಯೂ ಬೆಕ್ಕುಗಳು ಸ್ವಚ್ಛಂದವಾಗಿ ಓಡಾಡುತ್ತಿರುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry