ಮಂಗಳವಾರ, ಆಗಸ್ಟ್ 11, 2020
26 °C
ಟೇಬಲ್‌ ಟೆನಿಸ್: ಸಿಂಗಲ್ಸ್‌ನಲ್ಲಿ ಮೌಮಾ, ಮಧುರಿಕಾ ಹೋರಾಟ ಅಂತ್ಯ

ಸೆಮಿಫೈನಲ್‌ಗೆ ಮಣಿಕಾ ಬಾತ್ರಾ

ಪಿಟಿಐ Updated:

ಅಕ್ಷರ ಗಾತ್ರ : | |

ಸೆಮಿಫೈನಲ್‌ಗೆ ಮಣಿಕಾ ಬಾತ್ರಾ

ಗೋಲ್ಡ್‌ ಕೋಸ್ಟ್‌: ಭಾರತದ ಮಣಿಕಾ ಬಾತ್ರಾ, ಕಾಮನ್‌ವೆಲ್ತ್‌ ಕ್ರೀಡಾಕೂಟದ ಟೇಬಲ್‌ ಟೆನಿಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಮಣಿಕಾ 11–5, 11–6, 11–2, 6–11, 11–9ರಲ್ಲಿ ಸಿಂಗಪುರದ ಯಿಹಾನ್‌ ಜೊವು ಅವರನ್ನು ಸೋಲಿಸಿದರು.

ಮಧುರಿಕಾ, ಮೌಮಾಗೆ ನಿರಾಸೆ: ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಮಧುರಿಕಾ ಪಾಟ್ಕರ್‌ ಮತ್ತು ಮೌಮಾ ದಾಸ್‌ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಸೋತರು.

ಕ್ವಾರ್ಟರ್ ಫೈನಲ್‌ಗೆ ಶರತ್‌: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಶರತ್‌ ಕಮಲ್‌, ಹರ್ಮಿತ್‌ ದೇಸಾಯಿ ಮತ್ತು ಜಿ.ಸತ್ಯನ್‌ ಅವರು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಮೌಮಾ ದಾಸ್‌ ಮತ್ತು ಮಣಿಕಾ ಬಾತ್ರಾ ಸೆಮಿಫೈನಲ್‌ ಪ್ರವೇಶಿಸಿದರು.

ಕ್ವಾರ್ಟರ್‌ ಫೈನಲ್‌ನಲ್ಲಿ ಮಣಿಕಾ ಮತ್ತು ಮೌಮಾ 12–14, 11–3, 11–7, 11–6ರಲ್ಲಿ ಇಂಗ್ಲೆಂಡ್‌ನ ಟಿನ್‌ ಟಿನ್‌ ಹೊ ಮತ್ತು ಮೇರಿ ಸ್ಯಾಪ್ಟಸಿನೊಸ್‌ ಅವರನ್ನು ಪರಾಭವಗೊಳಿಸಿದರು.

ಈ ವಿಭಾಗದ ಇನ್ನೊಂದು ಪಂದ್ಯದಲ್ಲಿ ಸುತೀರ್ಥ ಮುಖರ್ಜಿ ಮತ್ತು ಪೂಜಾ ಸಹಸ್ರಬುದ್ಧೆ 11–6, 11–7, 14–12ರಲ್ಲಿ ಕೆನಡಾದ ಅಲೈಸಿ ಕೋಟ್‌ ಮತ್ತು ಮೊ ಜಾಂಗ್‌ ವಿರುದ್ಧ ಗೆದ್ದು ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.