ಮಂಗಳವಾರ, ನವೆಂಬರ್ 29, 2022
21 °C

ರಾಷ್ಟ್ರ ರಾಜಕೀಯದಲ್ಲಿ ಸಂಚಲನ: ಮತ್ತೆರಡು ರಾಜ್ಯಗಳ ’ದೊಡ್ಡ’ ಪಕ್ಷಗಳಿಂದ ಸರ್ಕಾರ ರಚನೆಗೆ ಕಸರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರ ರಾಜಕೀಯದಲ್ಲಿ ಸಂಚಲನ: ಮತ್ತೆರಡು ರಾಜ್ಯಗಳ ’ದೊಡ್ಡ’ ಪಕ್ಷಗಳಿಂದ ಸರ್ಕಾರ ರಚನೆಗೆ ಕಸರತ್ತು

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹಾಗೂ ರಾಜಕೀಯ ವಿದ್ಯಮಾನಗಳು ರಾಷ್ಟ್ರ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. ಬಹುಮತಕ್ಕೆ ಅಗತ್ಯವಿರುವುದಕ್ಕಿಂತ 9 ಸ್ಥಾನ ಕೊರತೆಯಿದ್ದರೂ ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟಿರುವ ರಾಜ್ಯಪಾಲರ ಕ್ರಮ ವಿವಿಧ ರಾಜ‌್ಯಗಳ ರಾಜಕೀಯ ಪಕ್ಷಗಳನ್ನು ಜಾಗೃತಗೊಳಿಸಿವೆ.

ಗೋವಾ, ಬಿಹಾರ ಬಳಿಕ ಇದೀಗ ಮಣಿಪುರ, ಮೇಘಾಲಯ ರಾಜ್ಯಗಳಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷಗಳಾಗಿ ಹೊರಹೊಮ್ಮಿದ್ದ ಪಕ್ಷಗಳು ಅಧಿಕಾರಕ್ಕಾಗಿ ಕಸರತ್ತು ಆರಂಭಿಸಿವೆ.

ಮಣಿಪುರ ಮಾಜಿ ಮುಖ್ಯಮಂತ್ರಿ ಒಕ್ರಾಮ್ ಐಬೊಬಿ ಸಿಂಗ್ ಮತ್ತು ಮೇಘಾಲಯ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಶುಕ್ರವಾರ ರಾಜ್ಯಪಾಲರನ್ನು ಭೇಟಿಯಾಗಲು ಸಮಯ ಕೇಳಿದ್ದಾರೆ.

‘ನಾವು ನಾಳೆ ರಾಜ್ಯಪಾಲರನ್ನು ಭೇಟಿಮಾಡಲು ಸಮಯ ಕೋರುತ್ತೇವೆ. ನಮ್ಮದು ಏಕೈಕ ದೊಡ್ಡ ಪಕ್ಷ ಮತ್ತು ಫಲಿತಾಂಶ ಪ್ರಕಟವಾದ ಕೂಡಲೇ ರಾಜ್ಯಪಾಲರನ್ನು ಭೇಟಿಯಾಗಿದ್ದೆವು. ಆದರೆ, ಸರ್ಕಾರ ರಚಿಸಲು ನಮ್ಮನ್ನು ಆಹ್ವಾನಿಸಿರಲಿಲ್ಲ. ಇತ್ತೀಚಿನ ವಿದ್ಯಮಾನಗಳ ಆಧಾರದ ಮೇಲೆ, ಬಿಜೆಪಿಗೆ ಅವಕಾಶ ಕೊಡಬಹುದಾದರೆ ನಮಗೇಕಿಲ್ಲ?’ ಎಂದು ಮಣಿಪುರ ಮಾಜಿ ಮುಖ್ಯಮಂತ್ರಿ ಒಐ ಸಿಂಗ್‌ ಪ್ರಶ್ನಿಸಿದ್ದಾರೆ.

ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಹಾರದಲ್ಲಿ ಆರ್‌ಜೆಡಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಹೀಗಾಗಿ ಗೋವಾ ಕಾಂಗ್ರೆಸ್‌ ಉಸ್ತುವಾರಿ ಚೆಲ್ಲ ಕುಮಾರ್‌ ಹಾಗೂ ಆರ್‌ಜೆಡಿ ಮುಖಂಡ ಪಕ್ಷದ ಮುಖಂಡ ತೇಜಸ್ವಿ ಯಾದವ್‌ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮನವಿ ಮಾಡುವುದಾಗಿ ಈಗಾಗಲೇ ಹೇಳಿದ್ದಾರೆ.

ಬಿಹಾರ ವಿಧಾನಸಭೆ ಸಂಖ್ಯಾಬಲ

ಪಕ್ಷ  ಸ್ಥಾನಗಳು
ಆರ್‌ಜೆಡಿ 80
ಜೆಡಿ(ಯು) 71
ಬಿಜೆಪಿ 53
ಕಾಂಗ್ರೆಸ್‌ 27
ಇತರೆ 12
ಒಟ್ಟು 243

ಗೋವಾ ವಿಧಾನಸಭೆ ಸಂಖ್ಯಾಬಲ

ಪಕ್ಷ ಸ್ಥಾನಗಳು
ಕಾಂಗ್ರೆಸ್‌ 17
ಬಿಜೆಪಿ 13
ಸ್ವತಂತ್ರ 03
ಇತರೆ 07
ಒಟ್ಟು 40

ಮಣಿಪುರ ವಿಧಾನಸಭೆ ಸಂಖ್ಯಾಬಲ

ಪಕ್ಷ ಸ್ಥಾನಗಳು
ಕಾಂಗ್ರೆಸ್‌ 28
ಬಿಜೆಪಿ 21
ಟಿಎಂಸಿ 01
ಇತರೆ 10
ಒಟ್ಟು 60

ಮೇಘಾಲಯ ವಿಧಾನಸಭೆ ಸಂಖ್ಯಾಬಲ

ಪಕ್ಷ ಸ್ಥಾನಗಳು
ಕಾಂಗ್ರೆಸ್‌ 21
ಎನ್‌ಪಿಪಿ 19
ಬಿಜೆಪಿ 02
ಇತರೆ 17
ಒಟ್ಟು 59

ಇನ್ನಷ್ಟು: ಗೋವಾದಲ್ಲಿ ಸರ್ಕಾರ ರಚನೆಗೆ ಕಾಂಗ್ರೆಸ್‌ ಕಸರತ್ತು: ಶುಕ್ರವಾರ ರಾಜ್ಯಪಾಲರ ಮುಂದೆ ಪರೇಡ್‌ ನಡೆಸಲು ಶಾಸಕರು ಸಜ್ಜು

ಬಿಹಾರದಲ್ಲಿ ಆರ್‌ಜೆಡಿ ಅತಿ ದೊಡ್ಡ ಪಕ್ಷ; ಸರ್ಕಾರ ರಚನೆಗೆ ರಾಜ್ಯಪಾಲರಲ್ಲಿ ಮನವಿ: ತೇಜಸ್ವಿ ಯಾದವ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.