ಮತದಾರರಿಗೆ ಅವಮಾನ!

7

ಮತದಾರರಿಗೆ ಅವಮಾನ!

Published:
Updated:

ಸುಶಿಕ್ಷಿತರೇ ಹೆಚ್ಚಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಮಗ ಎಸ್.ಎಸ್. ಮಲ್ಲಿಕಾರ್ಜುನ ಸೋತಿದ್ದನ್ನು ಸಹಿಸಲಾರದೆ, ‘ಪ್ರಜ್ಞಾವಂತ ಮತದಾರರಿಗೆ ಪ್ರಜ್ಞೆ ಇಲ್ಲ’ (ಪ್ರ.ವಾ., ಮೇ 17) ಎಂದು ಶಾಮನೂರು ಶಿವಶಂಕರಪ್ಪ ಅವರು ಪ್ರತಿಕ್ರಿಯಿಸಿರುವುದು ಮತದಾರರಿಗೆ ಮಾಡಿದ ಅವಮಾನವೇ ಸರಿ.

ತಾವು, ತಮ್ಮವರು ಗೆದ್ದರೆ ಮತದಾರರನ್ನು ಪ್ರಜ್ಞಾವಂತರೆಂದು ಕರೆಯುವ ರಾಜಕಾರಣಿಗಳು, ಸೋತರೆ ಪ್ರಜ್ಞೆ ಇಲ್ಲದವರೆಂದು ಅವಮಾನಿಸುವುದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಇಂಥವರಿಗೆ ಬುದ್ಧಿ ಕಲಿಸುವ ಕಾಲ ಮುಂದೆ ಬರುತ್ತದೆ ಎಂಬುದನ್ನು ಮತದಾರರು ಮತ್ತು ರಾಜಕಾರಣಿಗಳು ತಿಳಿದುಕೊಳ್ಳಬೇಕಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry