ಮಲೇಷ್ಯಾ: ಸಚಿವ ಸಂಪುಟ ಸೇರಿದ ಮೊದಲ ಸಿಖ್‌

7

ಮಲೇಷ್ಯಾ: ಸಚಿವ ಸಂಪುಟ ಸೇರಿದ ಮೊದಲ ಸಿಖ್‌

Published:
Updated:
ಮಲೇಷ್ಯಾ: ಸಚಿವ ಸಂಪುಟ ಸೇರಿದ ಮೊದಲ ಸಿಖ್‌

ಕ್ವಾಲಾಲಂಪುರ: ಭಾರತ ಸಂಜಾತ ವಕೀಲ, ರಾಜಕಾರಣಿ ಗೋವಿಂದ್‌ ಸಿಂಗ್‌ ದಿಯೊ (40) ಮಲೇಷ್ಯಾದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ನೇಮಕಗೊಂಡಿದ್ದಾರೆ.

ಈ ಮೂಲಕ ಮುಸ್ಲಿಂ ಬಹುಸಂಖ್ಯಾತ ದೇಶವಾದ ಮಲೇಷ್ಯಾದ ಸಂಪುಟಕ್ಕೆ ನೇಮಕಗೊಂಡ ಸಿಖ್‌ ಸಮುದಾಯದ ಮೊದಲ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದಿಯೊ ಅವರಿಗೆ ಸಂವಹನ ಮತ್ತು ಬಹುಮಾಧ್ಯಮ ಖಾತೆಯ ಹೊಣೆ ನೀಡಲಾಗಿದೆ.

ಇವರ ಜತೆ ಭಾರತ ಮೂಲದ ಎಂ.ಕುಲಶೇಗರನ್‌ (61) ಅವರು ಪ್ರಧಾನಿ ಮಹತಿರ್‌ ಮೊಹಮದ್‌ ಅವರ ಸಂಪುಟ ಸೇರಿದ್ದಾರೆ. ಇವರಿಗೆ ಮಾನವ

ಸಂಪನ್ಮೂಲ ಖಾತೆಯ ಜವಾಬ್ದಾರಿ ನೀಡಲಾಗಿದೆ. ಇಬ್ಬರೂ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.

ಮಲೇಷ್ಯಾ ಸಂಸತ್ತಿಗೆ ಪ್ರಸಕ್ತ ಸಾಲಿನಲ್ಲಿ ನಡೆದ ಚುನಾವಣೆಯಲ್ಲಿ ಪುಚೊಂಗ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ದಿಯೊ, 47,635 ಮತಗಳ ಅಂತರದಿಂದ ಜಯ ಗಳಿಸಿದ್ದರು. ಇವರ ತಂದೆ ಕರ್ಪಾಲ್‌ ಸಿಂಗ್‌ ಕೂಡ ವಕೀಲ, ರಾಜಕಾರಣಿಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry