7

ಬಂದ್‌ ಅವಶ್ಯವಿತ್ತೇ?

Published:
Updated:

ಸಾಲಮನ್ನಾ ಘೋಷಣೆಯ ವಿಳಂಬದ ವಿರುದ್ಧ ಬಿಜೆಪಿಯು ಬಂದ್‌ ಅಸ್ತ್ರ ಪ್ರಯೋಗಿಸಿದ್ದು ಸರಿಯೇ? ಇದು, ನಿಸ್ಸಂದೇಹವಾಗಿ ಆತುರದ ನಡೆ. ಬಂದ್ ಬಗ್ಗೆ ನಂತರ ಗೊಂದಲದ ಹೇಳಿಕೆಗಳು ಹೊರಬಿದ್ದವು. ಬಂದ್‌ ಕೂಡ ಯಶಸ್ಸಾಗಲಿಲ್ಲ. ಆದರೆ ಜನರಿಗೆ ತೊಂದರೆಯಾಗಿದ್ದಂತೂ ಸತ್ಯ. ಇದರಿಂದ ಬಿಜೆಪಿ ವರ್ಚಸ್ಸಿಗೂ ಧಕ್ಕೆ ಆಗಿದೆ.

ಏಕೋ ಕಾದು ನೋಡುವ ಸಂಯಮ ಬಿಜೆಪಿ ನಾಯಕರಲ್ಲಿ ನಶಿಸಿದಂತಿದೆ. ಆತುರದಲ್ಲಿ ಸರ್ಕಾರ ರಚಿಸಿ ಕೈಸುಟ್ಟುಕೊಂಡದ್ದೂ ಇದಕ್ಕೊಂದು ನಿದರ್ಶನ. ಉತ್ತರ ಕರ್ನಾಟಕದಲ್ಲಿ ಕೆಲವು ಕಡೆ ಅಂಗಡಿ, ಮಳಿಗೆಗಳನ್ನು ಒತ್ತಾಯಪೂರ್ವಕವಾಗಿ ಬಂದ್‌ ಮಾಡಿಸಲಾಯಿತು. ಇಂತಹ ಹುನ್ನಾರಗಳು ಬಿಜೆಪಿಗೆ ಶೋಭೆ ತರುವುದಿಲ್ಲ. ಸಾಲಮನ್ನಾ ವಿಷಯದಲ್ಲಿ ಬಿಜೆಪಿಗೆ ರೈತರ ಪರ ಕಾಳಜಿಗಿಂತ ‘ರಾಜಕೀಯ’ಯೇ ಮುಖ್ಯವಾದಂತಿದೆ. ಇಂತಹ ಎಡವಟ್ಟುಗಳು ಮರುಕಳಿಸದಂತೆ ಎಚ್ಚರ ವಹಿಸುವುದು ಒಳ್ಳೆಯದು.

-ಗಂಗಾಧರ ಅಂಕೋಲೆಕರ, ಧಾರವಾಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry