ಡ್ರಾಪ್‌ ಕೊಡುವ ನೆಪದಲ್ಲಿ ದರೋಡೆ

7

ಡ್ರಾಪ್‌ ಕೊಡುವ ನೆಪದಲ್ಲಿ ದರೋಡೆ

Published:
Updated:

ಬೆಂಗಳೂರು: ಡ್ರಾಪ್‌ ಕೊಡುವ ನೆಪದಲ್ಲಿ ಊರಿಗೆ ಹೊರಟ್ಟಿದ್ದ ವ್ಯಕ್ತಿಯೊಬ್ಬನನ್ನು ಕಾರು ಹತ್ತಿಸಿಕೊಂಡ ಮೂವರು ದರೋಡೆಕೋರರು ಲಾಂಗ್‌, ಡ್ರ್ಯಾಗರ್‌ ತೋರಿಸಿ ₹58 ಸಾವಿರ ನಗದು, ಚಿನ್ನದ ಉಂಗುರ ಕದ್ದು, ಪರಾರಿಯಾಗಿರುವ ಪ್ರಕರಣ ಮೈಸೂರು ರಸ್ತೆಯ ಪಂತರಪಾಳ್ಯ ಬಸ್‌ ನಿಲ್ದಾಣದ ಬಳಿ ನಡೆದಿದೆ.

ನಗರದಲ್ಲಿ ನೆಲೆಸಿರುವ, ಮದ್ದೂರು ತಾಲ್ಲೂಕು ಹೊಲಗೆರಹಳ್ಳಿ ನಿವಾಸಿ ಪ್ರತಾಪ್‌ ದರೋಡೆಗೊಳಗಾಗಿದ್ದು, ಬ್ಯಾಟರಾಯನಪುರ ಪೊಲೀಸರಿಗೆ ದೂರು ನೀಡಿದ್ದಾರೆ.

‘ಇದೇ 3ರಂದು ಊರಿಗೆ ಹೋಗಲು ರಾತ್ರಿ 12ರ ಸುಮಾರಿಗೆ ಪಂತರಪಾಳ್ಯ ಬಸ್‌ ನಿಲ್ದಾಣದ ಬಳಿ ನಿಂತಾಗ, ಅಲ್ಲಿಗೆ ಬಂದ ಕಾರೊಂದನ್ನು ಹತ್ತಿ, ಹಿಂಬದಿಯ ಸೀಟಿನಲ್ಲಿ ಕುಳಿತು ಮದ್ದೂರಿಗೆ ಹೊರಟ್ಟಿದ್ದೆ’ ಎಂದು ಪ್ರತಾಪ್‌ ದೂರಿನಲ್ಲಿ ತಿಳಿಸಿದ್ದಾರೆ.

‘ಮದ್ದೂರಿನತ್ತ ಹೊರಟಾಗ ಮೈಸೂರು ರಸ್ತೆಯಲ್ಲಿರುವ ಅರವಿಂದ ಗಾರ್ಮೆಂಟ್ಸ್‌ ಬಳಿ ಚಾಲಕ ಕಾರು ನಿಲ್ಲಿಸಿ ಮೂತ್ರವಿರ್ಜನೆಗೆ ಹೋಗಿದ್ದಾನೆ. ಆಗ ಎದುರಿಗೆ ಕುಳಿತ ದರೋಡೆಕೋರನೊಬ್ಬ ಹಿಂಬದಿ ಸೀಟಿಗೆ ಬಂದು ಕುಳಿತು ಹಣ ಕೊಡು, ಇಲ್ಲದಿದ್ದರೆ ಸಾಯಿಸುತ್ತೇನೆ ಎಂದು ಲಾಂಗ್ ಮತ್ತು ಡ್ರ್ಯಾಗರ್‌ ತೆಗೆದು ತೋರಿಸಿದ್ದಾನೆ’ ಎಂದು ಅವರು ಹೇಳಿದ್ದಾರೆ.

‘ಒಬ್ಬ ಲಾಂಗ್‌ ಅನ್ನು ಕುತ್ತಿಗೆ ಹಿಡಿದುಕೊಂಡಿದ್ದ, ಇನ್ನೊಬ್ಬ ಪ್ಯಾಂಟ್‌ನ ಕಿಸೆಗೆ ಕೈಹಾಕಿ ಹಣ ಮತ್ತು ಕೈಯಲ್ಲಿದ್ದ ಉಂಗುರು ಕಿತ್ತುಕೊಂಡಿದ್ದಾನೆ. ಬಳಿಕ ಕಾರು ಚಲಾಯಿಸಿಕೊಂಡು ಹೋಗಿ ಮೈಲಸಂದ್ರದ ಕಡೆಗೆ ಹೋಗುವ ರಸ್ತೆಯ ನಿರ್ಜನ ಪ್ರದೇಶದಲ್ಲಿ ನನ್ನನ್ನು ಹೊರಗೆ ತಳ್ಳಿ ಪರಾರಿಯಾಗಿದ್ದಾರೆ’ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry