ಪರಿಷತ್: ಇಂದು ಮತ ಎಣಿಕೆ

7

ಪರಿಷತ್: ಇಂದು ಮತ ಎಣಿಕೆ

Published:
Updated:

ಬೆಂಗಳೂರು: ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರರ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಇದೇ 12ರಂದು ಬೆಳಿಗ್ಗೆ 8ರಿಂದ ನಗರದ ಆರ್‌.ಸಿ. ಕಾಲೇಜಿನಲ್ಲಿ ನಡೆಯಲಿದೆ.

ಪದವೀಧರರ ಕ್ಷೇತ್ರದಲ್ಲಿ 22 ಹುರಿಯಾಳುಗಳಿದ್ದು, ಅ.ದೇವೇಗೌಡ (ಬಿಜೆಪಿ), ಅಚ್ಚೇಗೌಡ ಶಿವಣ್ಣ (ಜೆಡಿಎಸ್‌) ಹಾಗೂ ರಾಮೋಜಿ ಗೌಡ (ಕಾಂಗ್ರೆಸ್‌) ಅವರ ಭವಿಷ್ಯ ನಿರ್ಧಾರವಾಗಲಿದೆ. ಮತ ಎಣಿಕೆ ತಡ ರಾತ್ರಿವರೆಗೂ ನಡೆಯುವ ಸಾಧ್ಯತೆ ಇದೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ವೈ.ಎ.ನಾರಾಯಣಸ್ವಾಮಿ (ಬಿಜೆಪಿ), ರಮೇಶ್‌ ಬಾಬು (ಜೆಡಿಎಸ್‌) ಹಾಗೂ ಎಂ. ರಾಮಪ್ಪ (ಕಾಂಗ್ರೆಸ್‌) ಅವರ ಭವಿಷ್ಯ ನಿರ್ಧಾರವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry