ಭಾರತಕ್ಕೆ ಅಪಾಚೆ ಹೆಲಿಕಾಪ್ಟರ್ ಮಾರಾಟ: ಅಮೆರಿಕ ಸಮ್ಮತಿ

7

ಭಾರತಕ್ಕೆ ಅಪಾಚೆ ಹೆಲಿಕಾಪ್ಟರ್ ಮಾರಾಟ: ಅಮೆರಿಕ ಸಮ್ಮತಿ

Published:
Updated:

ವಾಷಿಂಗ್ಟನ್: ರಕ್ಷಣಾ ಕ್ಷೇತ್ರದ ಸಾಮರ್ಥ್ಯವನ್ನು ಹೆಚ್ಚಿಸಬಲ್ಲ ಆರು ಅಪಾಚೆ ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಒಪ್ಪಿಗೆ ನೀಡಿದೆ.

ಎಎಚ್‌–64ಇ ಸರಣಿಯ ಹೆಲಿಕಾಪ್ಟರ್‌ಗಳನ್ನು 930 ಮಿಲಿಯನ್‌ ಯುಎಸ್‌ ಡಾಲರ್‌ಗೆ ಮಾರಾಟ ಮಾಡಲು ಡೊನಾಲ್ಡ್‌ ಟ್ರಂಪ್‌ ಆಡಳಿತ ಅನುಮೋದನೆ ನೀಡಿದೆ ಎಂದು ‘ಪೆಂಟಗಾನ್‌’ ತಿಳಿಸಿದೆ.

ಹೆಲಿಕಾಪ್ಟರ್‌ ಜತೆ ಅಗ್ನಿ ನಿಯಂತ್ರಣ ರಾಡಾರ್‌ಗಳು, ಸ್ಟಿಂಗರ್‌ ಕ್ಷಿಪಣಿಗಳು, ರಾತ್ರಿ ವೀಕ್ಷಣೆಯ ಸೆನ್ಸರ್‌ಗಳು, ಸಮುದ್ರಯಾನ ವ್ಯವಸ್ಥೆಗೆ ಸಂಬಂಧಿಸಿದ ಉಪಕರಣಗಳು ಭಾರತಕ್ಕೆ ಸಿಗಲಿದೆ. ಇದರಿಂದ ದೇಶದ ಗಡಿ ರಕ್ಷಣೆಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಭಾರತದ ಮನವಿಗೆ ಸ್ಪಂದಿಸಿ, ಅಪಾಚೆ ಹೆಲಿಕಾಪ್ಟರ್‌ಗಳನ್ನು ಮಾರಾಟ ಮಾಡಲು ಅಮೆರಿಕ ಮುಂದೆ ಬಂದಿದ್ದು, ಇದರಿಂದ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಮತ್ತಷ್ಟು ಬಲಪಡಲಿದೆ ಎಂದು ಅಮೆರಿಕ ಹೇಳಿದೆ.

ಅಮೆರಿಕ ಕಾಂಗ್ರೆಸ್‌ (ಸಂಸತ್ತು) ಒಪ್ಪಿಗೆ ನೀಡಿದ ಬಳಿಕ ಹೆಲಿಕಾಪ್ಟರ್‌ಗಳ ಮಾರಾಟ ವಿಷಯವನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ. ಸಂಸದರು ಇದಕ್ಕೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry