ವರ್ಗಾವಣೆ ಎಂಬ ಮರೀಚಿಕೆ

7

ವರ್ಗಾವಣೆ ಎಂಬ ಮರೀಚಿಕೆ

Published:
Updated:

ಶಿಕ್ಷಕರ ವರ್ಗಾವಣೆ ನಿಯಮಕ್ಕೆ ತಿದ್ದುಪಡಿ ತಂದು ವರ್ಗಾವಣೆ ಪ್ರಕ್ರಿಯೆಗೆ ಕಳೆದ ವರ್ಷದ ಮಾರ್ಚ್ ತಿಂಗಳಲ್ಲೇ ಚಾಲನೆ ನೀಡಲಾಗಿತ್ತು. ಆದರೆ ಈವರೆಗೂ ಒಂದಲ್ಲ ಒಂದು ನೆಪದಡಿ ವರ್ಗಾವಣೆ ಪ್ರಕ್ರಿಯೆಯನ್ನು ಮುಂದೂಡುತ್ತಲೇ ಬರಲಾಗಿದೆ. ಸೂಕ್ತ ಕಾರಣಗಳಿಲ್ಲದೆ ವರ್ಗಾವಣೆ ಪ್ರಕ್ರಿಯೆಯನ್ನು ಮುಂದೂಡುತ್ತಿರುವುದು ತರವಲ್ಲ.

ವರ್ಗಾವಣೆಗೆ ಸಂಬಂಧಿಸಿದಂತೆ ಕೌನ್ಸೆಲಿಂಗ್ ವೇಳಾಪಟ್ಟಿವರೆಗೂ ಪ್ರಕ್ರಿಯೆ ಪೂರ್ಣಗೊಂಡಿದೆ. ಕೌನ್ಸೆಲಿಂಗ್‌ ಪ್ರಕ್ರಿಯೆ ಈಗ ಆರಂಭಿಸಿದರೂ ಅದು ಪೂರ್ಣಗೊಳ್ಳಲು ಎರಡು ತಿಂಗಳಾದರೂ ಬೇಕು. ಆದರೆ ಇನ್ನೂ ಆರಂಭವೇ ಆಗಿಲ್ಲ. ಪರಿಷ್ಕೃತ ನಿಯಮಾನುಸಾರ ವರ್ಗಾವಣೆ ನಡೆದರೆ, ನಗರ ಪ್ರದೇಶಗಳ ಬಹುತೇಕ ಶಿಕ್ಷಕರು ಹಳ್ಳಿ ಶಾಲೆಗೆ ಬರುವುದು ಅನಿವಾರ್ಯವಾಗಿದೆ. ಅವರ ಒತ್ತಡ ತಂತ್ರವೂ ಈ ವಿಳಂಬದ ಹಿಂದೆ ಕೆಲಸ ಮಾಡಿರಬಹುದೇ?

ಕೆಲವು ಶಿಕ್ಷಕರ ಕುಟುಂಬ ದೂರದ ಊರಿನಲ್ಲಿದ್ದು ಸಂಸಾರದ ನಿರ್ವಹಣೆ ಸಮಸ್ಯೆಯಿಂದ ಶಿಕ್ಷಕರು ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಇದು ಬೋಧನೆ ಮೇಲೆ ವ್ಯತಿರಿಕ್ತ ಪರಿಣಾಮ ಬಿರುವ ಸಾಧ್ಯತೆ ಇದೆ. ಇದನ್ನೆಲ್ಲ ಸರ್ಕಾರ ಪರಿಗಣಿಸಬೇಕು.

–ಪ್ರಹ್ಲಾದ್ ವಾ.ಪತ್ತಾರ, ಯಡ್ರಾಮಿ, ಜೇವರ್ಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry