ದಕ್ಷಿಣ ಆಫ್ರಿಕಾ ತಂಡದಲ್ಲಿ ತಬ್ರೈಜ್‌, ಕೇಶವ್‌ಗೆ ಸ್ಥಾನ

7

ದಕ್ಷಿಣ ಆಫ್ರಿಕಾ ತಂಡದಲ್ಲಿ ತಬ್ರೈಜ್‌, ಕೇಶವ್‌ಗೆ ಸ್ಥಾನ

Published:
Updated:
ದಕ್ಷಿಣ ಆಫ್ರಿಕಾ ತಂಡದಲ್ಲಿ ತಬ್ರೈಜ್‌, ಕೇಶವ್‌ಗೆ ಸ್ಥಾನ

ಜೊಹಾನ್ಸ್‌ಬರ್ಗ್‌: ಸ್ಪಿನ್ನರ್‌ಗಳಾದ ತಬ್ರೈಜ್ ಶಂಸಿ ಮತ್ತು ಕೇಶವ್ ಮಹಾರಾಜ್‌ ಅವರು ಶ್ರೀಲಂಕಾ ಎದುರಿನ ಐದು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಗೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಕ್ರಿಕೆಟ್‌ ದಕ್ಷಿಣ ಆಫ್ರಿಕಾ (ಸಿಎಸ್‌ಎ) ಸೋಮವಾರ ತಂಡ ಪ್ರಕಟಿಸಿದೆ. ವೇಗದ ಬೌಲರ್‌ಗಳಾದ ಡೇಲ್‌ ಸ್ಟೇಯ್ನ್‌ ಮತ್ತು ವರ್ನಾನ್‌ ಫಿಲ್ಯಾಂಡರ್‌ ಅವರಿಗೆ ಸ್ಥಾನ ಸಿಕ್ಕಿಲ್ಲ. ಪ್ರಮುಖ ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ ಅವರಿಗೂ ಅವಕಾಶ ನೀಡಿಲ್ಲ.

ಮುಂದಿನ ತಿಂಗಳು ನಡೆಯುವ ಸರಣಿಯಲ್ಲಿ ಅನುಭವಿ ಬ್ಯಾಟ್ಸ್‌ಮನ್‌ ಫಾಫ್‌ ಡು ಪ್ಲೆಸಿ, ತಂಡವನ್ನು ಮುನ್ನಡೆಸಲಿದ್ದಾರೆ. ಹಾಶೀಮ್‌ ಆಮ್ಲಾ, ಡೇವಿಡ್‌ ಮಿಲ್ಲರ್‌, ಕ್ವಿಂಟನ್‌ ಡಿ ಕಾಕ್‌ ಮತ್ತು ಜೆ.ಪಿ.ಡುಮಿನಿ ಅವರು ಅವಕಾಶ ಪಡೆದಿದ್ದಾರೆ.

ತಂಡ ಇಂತಿದೆ: ಫಾಫ್‌ ಡು ಪ್ಲೆಸಿ (ನಾಯಕ), ಹಾಶೀಮ್‌ ಆಮ್ಲಾ, ಜೂನಿಯರ್‌ ಡಲಾ, ಕ್ವಿಂಟನ್‌ ಡಿ ಕಾಕ್‌ (ವಿಕೆಟ್‌ ಕೀಪರ್‌), ಜೆ.ಪಿ.ಡುಮಿನಿ, ರೀಜಾ ಹೆಂಡ್ರಿಕ್ಸ್‌, ಹೆನ್ರಿಕ್‌ ಕ್ಲಾಸೆನ್‌ (ವಿಕೆಟ್‌ ಕೀಪರ್‌), ಕೇಶವ್‌ ಮಹಾ ರಾಜ್‌, ಏಡನ್‌ ಮಾರ್ಕರಮ್‌, ಡೇವಿಡ್‌ ಮಿಲ್ಲರ್‌, ವಿಯಾನ್‌ ಮುಲ್ದರ್‌, ಲುಂಗಿ ಸಾನಿ ಗಿಡಿ, ಆ್ಯಂಡಿಲೆ ಪೆಹ್ಲುಕವಾಯೊ, ಕಗಿಸೊ ರಬಾಡ ಮತ್ತು ತಬ್ರೈಜ್‌ ಶಂಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry