20 ಭಾಷೆಗಳಲ್ಲಿಯೂ ಸಿಟಿಇಟಿ: ಜಾವಡೇಕರ್‌

7

20 ಭಾಷೆಗಳಲ್ಲಿಯೂ ಸಿಟಿಇಟಿ: ಜಾವಡೇಕರ್‌

Published:
Updated:

ನವದೆಹಲಿ: ಈ ಮೊದಲಿನಂತೆಯೇ ಎಲ್ಲ 20 ಭಾರತೀಯ ಭಾಷೆಗಳಲ್ಲಿ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ (ಸಿಟಿಇಟಿ) ನಡೆಸಲಾಗುವುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್‌ ತಿಳಿಸಿದ್ದಾರೆ.

ಸಿಟಿಇಟಿ ಬರೆಯುವ ಭಾಷೆಗಳ ಪಟ್ಟಿಯಿಂದ ಕನ್ನಡ, ತಮಿಳು, ಮಲಯಾಳ, ತೆಲುಗು, ಗುಜರಾತಿ ಹಾಗೂ ಬೆಂಗಾಲಿ ಸೇರಿದಂತೆ 17 ಭಾಷೆಗಳನ್ನು ತೆಗೆದುಹಾಕುವ ಸಿಬಿಎಸ್‌ಇ ನಿರ್ಧಾರಕ್ಕೆ ಟೀಕೆ ವ್ಯಕ್ತವಾದ ನಂತರ, ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ.

‘ಸಿಟಿಇಟಿ ಮೊದಲಿನಂತೆಯೇ ಎಲ್ಲ 20 ಭಾರತೀಯ ಭಾಷೆಗಳಲ್ಲಿ ನಡೆಸುವಂತೆ ಸಿಬಿಎಸ್‌ಇಗೆ ಸೂಚನೆ ನೀಡಿದ್ದೇನೆ’ ಎಂದು ಜಾವಡೇಕರ್‌ ಟ್ವೀಟ್‌ ಮಾಡಿದ್ದಾರೆ.

ಪ್ರಾದೇಶಿಕ ಭಾಷೆಗಳನ್ನು ಈ ಪಟ್ಟಿಯಿಂದ ತೆಗೆದು ಹಾಕಿದ್ದನ್ನು ಡಿಎಂಕೆ ನಾಯಕಿ ಕನಿಮೊಳಿ ಟೀಕಿಸಿದ್ದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry