ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Fact Check: ಅಣ್ಣಾಮಲೈಗೆ ಬೂತ್‌ವೊಂದರಲ್ಲಿ ಒಂದೇ ಮತ ಬಂದಿದೆ ಎನ್ನುವುದು ಸುಳ್ಳು

Published 6 ಜೂನ್ 2024, 0:39 IST
Last Updated 6 ಜೂನ್ 2024, 0:39 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯ ಫಲಿತಾಂಶವು ಜೂನ್‌ 4ರಂದು ಪ್ರಕಟಗೊಂಡಿದೆ. ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಬೂತ್‌ವೊಂದರಲ್ಲಿ ಕೇವಲ ಒಂದು ಮತವನ್ನು ಪಡೆದುಕೊಂಡಿದ್ದಾರೆ ಎಂದಿರುವ ಪೋಸ್ಟ್‌ಗಳು ಅದೇ ದಿನವೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಬೂತ್‌ವೊಂದರಲ್ಲಿ ಒಂದು ಮತ ಪಡೆದವ ತಮಿಳುನಾಡಿನ ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ ಎಂದು ಅವರ ಕುರಿತು ಅಪಹಾಸ್ಯವನ್ನೂ ಮಾಡಲಾಯಿತು. ಆದರೆ, ಇದು ಸುಳ್ಳು ಸುದ್ದಿ.

ತಮಿಳುನಾಡು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್‌.ಜಿ. ಸೂರ್ಯ ಅವರು ಈ ಕುರಿತು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಅಣ್ಣಾಮಲೈ ಅವರು ಬೂತ್‌ವೊಂದರಲ್ಲಿ ಒಂದೇ ಮತವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿರುವ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳಲಾಗುತ್ತಿದೆ. ಇದು ತಿರುಚಿದ ಚಿತ್ರ. ಅವರಿಗೆ 101 ಮತಗಳು ಬಂದಿದ್ದವು. 0 ಮತ್ತು 1 ಸಂಖ್ಯೆಯನ್ನು ಅಳಿಸಿಹಾಕಲಾಗಿದೆ ಎಂದು ಪೋಸ್ಟ್‌ ಮಾಡಿದ್ದಾರೆ. ಪಡೆದ ಮತಗಳ ಸಂಖ್ಯೆ ಇರುವ ಪಟ್ಟಿಯನ್ನೂ ಹಂಚಿಕೊಂಡಿದ್ದಾರೆ. ಆದ್ದರಿಂದ, ಅಣ್ಣಾಮಲೈ ಅವರು ಬೂತ್‌ವೊಂದರಲ್ಲಿ ಒಂದೇ ಮತವನ್ನು ಪಡೆದುಕೊಂಡಿದ್ದಾರೆ ಎನ್ನುವುದು ಸುಳ್ಳು ಸುದ್ದಿ ಎಂದು ಬೂಮ್‌ಲೈವ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT