ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ರಾಹುಲ್‌ ಗಾಂಧಿ ರ‍್ಯಾಲಿಯಲ್ಲಿ ಇರುವುದು ಪಾಕಿಸ್ತಾನದ ಧ್ವಜವಲ್ಲ

Fact Check
Published 16 ಏಪ್ರಿಲ್ 2024, 19:01 IST
Last Updated 16 ಏಪ್ರಿಲ್ 2024, 19:01 IST
ಅಕ್ಷರ ಗಾತ್ರ

ರಾಹುಲ್ ಗಾಂಧಿ ಅವರ ಚುನಾವಣಾ ರ‍್ಯಾಲಿಯೊಂದರಲ್ಲಿ ಕಾಂಗ್ರೆಸ್‌ನ ಧ್ವಜಗಳ ಜತೆಗೆ ಅಪಾರ ಸಂಖ್ಯೆಯಲ್ಲಿ ಹಸಿರು ಬಣ್ಣದ ಧ್ವಜಗಳು ಇರುವ ಚಿತ್ರ ಮತ್ತು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ಅವುಗಳ ಜತೆಗೆ, ‘ಪಾಕಿಸ್ತಾನದ ಧ್ವಜ. ಇದನ್ನು ನೋಡಿದರೆ ಗೊತ್ತಾಗುವುದಿಲ್ಲವೇ, ಕಾಂಗ್ರೆಸ್ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡಲು ಹೊರಟಿರುವುದು ಏಕೆ ಎಂದು’ ಕೆಲವರು ಸಂದೇಶ ಹಂಚಿಕೊಂಡಿದ್ದಾರೆ. ಇನ್ನು ಕೆಲವರು, ‘ಇದು ಪಾಕಿಸ್ತಾನವಲ್ಲ, ಕೇರಳ. ಇದು ಏನು ಎಂಬುದು ನಿಮಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ ಅಲ್ಲವೇ. ಮತದಾನದ ವೇಳೆ ನಿಮ್ಮ ಆಯ್ಕೆ ಸರಿಯಾಗಿರಲಿ’ ಎಂದು ಕರೆ ನೀಡಿದ್ದಾರೆ. ಆದರೆ ಅದು ಪಾಕಿಸ್ತಾನದ ಧ್ವಜವಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರ ಮತ್ತು ವಿಡಿಯೊ ಈಗಿನದ್ದಲ್ಲ. ಅದು 2019ರ ಲೋಕಸಭಾ ಚುನಾವಣೆಯ ವೇಳೆ ಕೇರಳದ ವಯನಾಡ್‌ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ರಾಹುಲ್‌ ಗಾಂಧಿ ನಡೆಸಿದ್ದ ರ‍್ಯಾಲಿಯ ಚಿತ್ರ. ಆ ಚಿತ್ರದಲ್ಲಿ ಇರುವ ಹಸಿರು ಧ್ವಜಗಳು ಪಾಕಿಸ್ತಾನದ ಧ್ವಜವಲ್ಲ. ಬದಲಿಗೆ ಐಎಂಯುಎಲ್‌ ಪಕ್ಷದ್ದು. ಆ ಚುನಾವಣೆಯ ವೇಳೆ ರಾಹುಲ್‌ ಅವರಿಗೆ ಐಎಂಯುಎಲ್‌ ಬೆಂಬಲ ಘೋಷಿಸಿತ್ತು. ಆದರೆ ಆ ಚಿತ್ರವನ್ನೇ ಬಳಸಿಕೊಂಡು ಈಗ ಕಾಂಗ್ರೆಸ್‌ ತನ್ನ ರ‍್ಯಾಲಿಯಲ್ಲಿ ಪಾಕಿಸ್ತಾನದ ಧ್ವಜ ಬಳಸುತ್ತಿದೆ ಎಂದು ಸುಳ್ಳು ಸುದ್ದಿ ಸೃಷ್ಟಿಸಲಾಗಿದೆ ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT