ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮಭಜನೆಯನ್ನು ಹಾಡಿದ್ದು ಪ್ರಧಾನಿ ಮೋದಿ ಅವರು ಎನ್ನುವುದು ಸುಳ್ಳು ಸುದ್ದಿ

Published 5 ಜನವರಿ 2024, 0:00 IST
Last Updated 5 ಜನವರಿ 2024, 0:00 IST
ಅಕ್ಷರ ಗಾತ್ರ

ರಾಮನ ಕುರಿತ ಭಜನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾಮ–ಲಕ್ಷ್ಮಣ ಸೀತೆ, ಹನುಮಂತರ ಚಿತ್ರವೂ ಈ ವಿಡಿಯೊದಲ್ಲಿ ಇದೆ. ‘ಈ ರಾಮ ಭಜನೆಯನ್ನು ಯಾರು ಹಾಡುತ್ತಿದ್ದಾರೆಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುತ್ತೀರಿ! ಅದು ಬೇರೆ ಯಾರೂ ಅಲ್ಲ, ನಮ್ಮ ದೇಶದ ಪ್ರಧಾನ ಮಂತ್ರಿಯವರಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜಿ. ಅಂತಹ ಧಾರ್ಮಿಕ ನಂಬಿಕೆ ಮತ್ತು ಸಂಸ್ಕೃತಿಯನ್ನು ತಿಳಿದಿರುವ ಮತ್ತು ಅರ್ಥಮಾಡಿಕೊಳ್ಳುವ ಪ್ರಧಾನಿಯಾಗಿರುವ ದೇಶವು ಧನ್ಯವಾಗಿದೆ....ಇದು ಅತ್ಯಂತ ಹೆಮ್ಮೆಯ ವಿಷಯ. ವೃತ್ತಿಪರ ಗಾಯಕರಂತೆ ಹಾಡಿದ್ದಾರೆ...’ ಎನ್ನುವ  ವಿವಿಧ ಭಾಷೆಗಳ ಬರಹವೂ ಇರುವ ವಿಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.

ವಿಡಿಯೊದಲ್ಲಿ ದೊರೆತ ಕೆಲವು ಪದಗಳನ್ನು ಗೂಗಲ್‌ನಲ್ಲಿ ಹುಡುಕಾಡಿದಾಗ, ಯೂಟ್ಯೂಬ್‌ನಲ್ಲಿ ಇದೇ ಧ್ವನಿಯ ವಿಡಿಯೊವೊಂದು ದೊರೆಯಿತು. ಈ ವಿಡಿಯೊವು ‘ಪೂಜ್ಯ ಪ್ರೇಮ್‌ಭೂಷಣ್‌ಜಿ ಮಹಾರಾಜ್‌’ ಎನ್ನುವ ಖಾತೆಯಿಂದ ಯೂಟ್ಯೂಬ್‌ನಲ್ಲಿ ಮಾರ್ಚ್‌ 18, 2021ರಂದು ಅಪ್‌ಲೋಡ್‌ ಆಗಿದೆ. ಜೊತೆಗೆ, ಈ ಹಾಡನ್ನು ದೊಡ್ಡ ಸಂಖ್ಯೆಯ ಭಕ್ತರ ಎದುರು ಪ್ರವಚನದ ಸಂದರ್ಭದಲ್ಲಿ ಹಾಡಿದ್ದಾಗಿದೆ. ‘ಪೂಜ್ಯ ಪ್ರೇಮ್‌ಭೂಷಣ್‌ಜಿ ಮಹಾರಾಜ್‌ ಅವರ ಭಜನೆ, ‘ರಾಮ್‌ ನಾಮ್‌ ಕೆ ಸಾಬೂನ್‌ ಸೆ ಜೋ’ ಎನ್ನುವ ಕ್ಯಾಪ್ಷನ್‌ ಕೂಡ ಈ ವಿಡಿಯೊಗೆ ಇದೆ. ‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊದ ಧ್ವನಿಯು ಪ್ರೇಮ್‌ಭೂಷಣ್‌ಜಿ ಅವರದ್ದಾಗಿದೆ’ ಎಂದು ಈ ಖಾತೆಯನ್ನು ನಿರ್ವಹಿಸುವವರು ತಿಳಿಸಿದ್ದಾರೆ . ಇದೇ ಮಾತನ್ನು ಪ್ರೇಮ್‌ಭೂಷಣ್‌ಜಿ ಅವರ ಕಚೇರಿಯವರೂ ಖಚಿತಪಡಿಸಿದ್ದಾರೆ ಎಂದು ಬೂಮ್‌ಲೈವ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT