ನವದೆಹಲಿ (ಪಿಟಿಐ): ಈ ಬಾರಿ ಮರು ಆಯ್ಕೆಯಾದ 165 ಸಂಸದರ ಪೈಕಿ 71 ಮಂದಿ ವಿರುದ್ಧ ಅಪರಾಧ ಪ್ರಕರಣಗಳು ಇವೆ. ಈ ಪೈಕಿ 13 ಸಂಸದರ ವಿರುದ್ಧ ಕಳೆದ ಐದು ವರ್ಷಗಳಲ್ಲಿ ಅತಿ ಹಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ.
ಆಗ್ರಾದ ಸಂಸದ ಡಾ.ರಾಮಶಂಕರ್ ಕಠೇರಿಯಾ ಅವರ ವಿರುದ್ಧ 21 ಪ್ರಕರಣಗಳು ದಾಖಲಾಗಿವೆ. 2009ರಲ್ಲಿ ಅವರ ವಿರುದ್ಧ ಯಾವುದೇ ಪ್ರಕರಣ ಇರಲಿಲ್ಲ. ಮಹಾರಾಷ್ಟ್ರದ ಹಾತ್ಕಣಗ್ಲೆ ಸಂಸದ ರಾಜು ಶೆಟ್ಟಿ ಹಾಗೂ ಕಾಂಗ್ರೆಸ್ ಸಂಸದ ಅಧಿರ್ ರಂಜನ್ ಚೌಧರಿ ವಿರುದ್ಧ 12 ಪ್ರಕರಣಗಳು ಇವೆ.
ನರೇಂದ್ರ ಮೋದಿ, ಅಡ್ವಾಣಿ ಮೇಲೂ ಆರೋಪ
(ಅಹಮದಾಬಾದ್ ವರದಿ): ಗುಜರಾತ್ನಿಂದ ಆಯ್ಕೆಯಾದ ನರೇಂದ್ರ ಮೋದಿ ಮತ್ತು ಎಲ್.ಕೆ.ಅಡ್ವಾಣಿ ಸೇರಿದಂತೆ 10 ಬಿಜೆಪಿ ಸಂಸದರು ಕ್ರಿಮಿನಲ್ ಆರೋಪಗಳನ್ನು ಹೊತ್ತವರಾಗಿದ್ದಾರೆ.