ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರುಣಾಚಲದ ತವಾಂಗ್‌ನಲ್ಲಿ 73 ಅಡಿ ಎತ್ತರಲ್ಲಿ ತ್ರಿವರ್ಣ ಧ್ವಜ

Published 30 ಡಿಸೆಂಬರ್ 2023, 12:36 IST
Last Updated 30 ಡಿಸೆಂಬರ್ 2023, 12:36 IST
ಅಕ್ಷರ ಗಾತ್ರ

ಇಟಾನಗರ: ಅರುಣಾಚಲ ಪ್ರದೇಶದ ತವಾಂಗ್‌ ಜಿಲ್ಲೆಯಲ್ಲಿ ಸಮುದ್ರ ಮಟ್ಟಕ್ಕಿಂತ 15,200 ಅಡಿ ಎತ್ತರದಲ್ಲಿ 73 ಅಡಿಯ ಹೈ–ಮಾಸ್ಟ್ ಸ್ತಂಭದಲ್ಲಿ ಬಿಜೆಪಿ ಶಾಸಕ ಸೇರಿಂಗ್ ತಶಿಯವರು ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಮಾರಂಭದಲ್ಲಿ ಮಾತನಾಡಿದ ಸೇರಿಂಗ್‌ ತಶಿ, ರಾಷ್ಟ್ರಧ್ವಜದ ಸ್ಥಾಪನೆಯು ಏಕತೆ, ಸಮಗ್ರತೆ ಮತ್ತು ರಾಷ್ಟ್ರೀಯ ಶಕ್ತಿಗೆ ಸ್ಫೂರ್ತಿಯ ಮೂಲವಾಗಿದೆ ಎಂದರು. ಅಲ್ಲದೆ ಹೈಮಾಸ್ಟ್ ಧ್ವಜವನ್ನು ಒದಗಿಸಿದ್ದಕ್ಕಾಗಿ ಫ್ಲ್ಯಾಗ್ ಫೌಂಡೇಶನ್ ಆಫ್ ಇಂಡಿಯಾ ಮತ್ತು ಧ್ವಜ ಸ್ಥಾಪನೆಗೆ ಅನುಕೂಲ ಮಾಡಿಕೊಟ್ಟ ಭಾರತೀಯ ಸೇನೆಗೆ ಶಾಸಕರು ಧನ್ಯವಾದಗಳನ್ನು ಅರ್ಪಿಸಿದರು.

ಫ್ಲ್ಯಾಗ್ ಫೌಂಡೇಶನ್ ಆಫ್ ಇಂಡಿಯಾ ಸಿಇಒ ಮೇಜರ್ ಜನರಲ್ (ನಿವೃತ್ತ) ಆಶಿಮ್ ಕೊಹ್ಲಿ, ತವಾಂಗ್ ಬ್ರಿಗೇಡ್ ಕಮಾಂಡರ್ ಬ್ರಿಗೇಡಿಯರ್ ವಿಪುಲ್ ಸಿಂಗ್ ರಜಪೂತ್, ಜಿಲ್ಲಾಡಳಿತದ ಅಧಿಕಾರಿಗಳು, ಭಾರತೀಯ ಸೇನೆಯ ಪಡೆಗಳು, ಐಟಿಬಿಪಿ, ಎಸ್‌ಎಸ್‌ಬಿ, ಎನ್‌ಸಿಸಿ ಕೆಡೆಟ್‌ಗಳು ಮತ್ತು ಇತರರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT