ವಿಜಯವಾಡ (ಪಿಟಿಐ): ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ವಿಜಯವಾಡದಲ್ಲಿ ಬಿ.ಆರ್. ಅಂಬೇಡ್ಕರ್ ಅವರ 125 ಅಡಿ ಎತ್ತರದ ಪ್ರತಿಮೆಯನ್ನು ಶುಕ್ರವಾರ ಅನಾವರಣಗೊಳಿಸಿದ್ದಾರೆ.
ಈ ಪ್ರತಿಮೆಯನ್ನು ‘ಸಾಮಾಜಿಕ ನ್ಯಾಯ ಪ್ರತಿಮೆ’ ಎಂದು ಕರೆಯಲಾಗಿದ್ದು, ₹ 400 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
81 ಅಡಿ ಎತ್ತರದ ಕಾಂಕ್ರೀಟ್ ಪೀಠದ ಮೇಲೆ ನಿರ್ಮಿಸಲಾದ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಇದು ಬಿ. ಆರ್. ಅಂಬೇಡ್ಕರ್ ಅನುಭವ ಕೇಂದ್ರ, 2 ಸಾವಿರ ಆಸನಗಳ ಸಮಾವೇಶ ಕೇಂದ್ರ, ಆಹಾರ ಮಳಿಗೆ, ಮಕ್ಕಳ ಆಟದ ಪ್ರದೇಶ, ಸಂಗೀತ ಕಾರಂಜಿ ಒಳಗೊಂಡಿದೆ.