ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ 29ರಂದು ಅಮರನಾಥ ಯಾತ್ರೆ ಆರಂಭ

Published 14 ಏಪ್ರಿಲ್ 2024, 13:01 IST
Last Updated 14 ಏಪ್ರಿಲ್ 2024, 13:01 IST
ಅಕ್ಷರ ಗಾತ್ರ

ಜಮ್ಮು: ಕಾಶ್ಮೀರದಲ್ಲಿರುವ ಅಮರನಾಥ ದೇಗುಲದ ವಾರ್ಷಿಕ ಯಾತ್ರೆಯು ಜೂನ್‌ 29ರಂದು ಪ್ರಾರಂಭವಾಗಲಿದೆ ಎಂದು ಶ್ರೀ ಅಮರನಾಥ ದೇಗುಲ ಮಂಡಳಿ (ಎಸ್‌ಎಎಸ್‌ಬಿ) ಭಾನುವಾರ ಪ್ರಕಟಿಸಿದೆ.

ಆಗಸ್ಟ್‌ 19ರಂದು ಯಾತ್ರೆಯು ಮುಕ್ತಾಯಗೊಳ್ಳಲಿದೆ. ಒಟ್ಟು 52 ದಿನಗಳ ಕಾಲ ನಡೆಯಲಿರುವ ಯಾತ್ರೆಗೆ ಮುಂಗಡ ಬುಕಿಂಗ್‌ ಅನ್ನು ಏ.15ರಂದು ಪ್ರಾರಂಭಿಸಲಾಗುವುದು ಎಂದು ತಿಳಿಸಿದೆ.

ಹಿಮಾಲಯದಲ್ಲಿ 3,880 ಮೀಟರ್‌ ಎತ್ತರದಲ್ಲಿರುವ ದೇವಸ್ಥಾನಕ್ಕೆ ತೆರಳಲು ಭಕ್ತರು ಯಾತ್ರೆ ಕೈಗೊಳ್ಳುತ್ತಾರೆ. ಅನಂತ್‌ನಾಗ್‌ ಜಿಲ್ಲೆಯ 48 ಕಿ.ಮೀ ನುನ್ವಾನ್‌–ಪಹಲ್‌ಗಾಮ್‌ ಮತ್ತು ಗಾಂದರ್‌ಬಲ್‌ ಜಿಲ್ಲೆಯ ಬಾಲ್‌ಟಾಲ್‌ ಮಾರ್ಗವಾಗಿ ಯಾತ್ರೆ ಸಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT