ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

AP Election 2024 | ಆಂಧ್ರದಲ್ಲಿ ಮತ್ತೆ ರಾಮರಾಜ್ಯ: ಚಂದ್ರಬಾಬು ನಾಯ್ಡು

Published 18 ಏಪ್ರಿಲ್ 2024, 2:49 IST
Last Updated 18 ಏಪ್ರಿಲ್ 2024, 2:49 IST
ಅಕ್ಷರ ಗಾತ್ರ

ಅಮರಾವತಿ: ಆಂಧ್ರಪ್ರದೇಶದಲ್ಲಿ ಮತ್ತೆ ರಾಮರಾಜ್ಯ ಬರಲಿದೆ ಎಂದು ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಚುನಾವಣೆ ಪ್ರಚಾರದ ಭಾಗವಾಗಿ ಅವರು ಕೃಷ್ಣ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು.

ಮತ್ತೆ ಜನರ ಆಶೀರ್ವಾದಗಳೊಂದಿಗೆ ರಾಮರಾಜ್ಯವು ರಾಜ್ಯಕ್ಕೆ ಮರಳಲಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಈ ಚುನಾವಣೆಯಲ್ಲಿ ಎನ್‌ಡಿಎ ಗೆಲ್ಲಲಿದೆ ಎಂದು ಹೇಳಿವೆ ಎಂದರು.

ಆಂಧ್ರದಲ್ಲಿ ಟಿಡಿಪಿ, ಬಿಜೆಪಿ ಮತ್ತು ಜನಸೇನಾ ಮೈತ್ರಿಕೂಟ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಇತ್ತೀಚೆಗೆ ಸಿಎಂ ಜಗನ್‌ ಮೇಲೆ ನಡೆದ ಕಲ್ಲಿನ ದಾಳಿಯು ಒಂದು ನಾಟಕ. ಅವರು ಜನರನ್ನು ದಾರಿ ತಪ್ಪಿಸಲು ನಾಟಕವಾಡುತ್ತಿದ್ದಾರೆ ಎಂದರು. 

ಜಗನ್ ಅವರ ಚಿಕ್ಕಪ್ಪನ(ವೈ.ಎಸ್.ವಿವೇಕಾನಂದ ರೆಡ್ಡಿ) ಹತ್ಯೆಯೂ ಸಹ ಒಂದು ದೊಡ್ಡ ನಾಟಕ. ಅವರು ಮತ್ತೆ ಸಾರ್ವಜನಿಕ ಸಹಾನುಭೂತಿ ಪಡೆಯಲು ಇಂತಹ ದಾಳಗಳನ್ನು ಉರುಳಿಸುತ್ತಾರೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT