ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ: 1 ಲಕ್ಷ ವಿದ್ಯಾರ್ಥಿಗಳಿಂದ ಪತ್ರ ಅಭಿಯಾನ

Published 10 ಏಪ್ರಿಲ್ 2024, 16:21 IST
Last Updated 10 ಏಪ್ರಿಲ್ 2024, 16:21 IST
ಅಕ್ಷರ ಗಾತ್ರ

ಅಸ್ಸಾಂ: ಲೋಕಸಭೆ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಚಲಾಹಿಸುವಂತೆ ಅಸ್ಸಾಂನ ಕಾಮರೂಪ ಜಿಲ್ಲೆಯ ಒಂದು ಲಕ್ಷ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಪತ್ರ ಬರೆದಿದ್ದಾರೆ.

ಮೇ 7ರಂದು ನಡೆಯಲಿರುವ ಮೂರನೇ ಹಂತದ ಚುನಾವಣೆಯಲ್ಲಿ ಶೇಕಡ 100ರಷ್ಟು ಮತದಾನದ ಗುರಿ ಹೊಂದಿರುವ ಸ್ವೀಪ್ ಸಮಿತಿ, ‘ಮತದಾನಕ್ಕಾಗಿ ಪೋಷಕರನ್ನು ಪ್ರೇರೇಪಿಸಿ’ ಎಂಬ ಅಭಿಯಾನವನ್ನು ನಡೆಸುತ್ತಿದ್ದು, 526 ಶಿಕ್ಷಣ ಸಂಸ್ಥೆಗಳಲ್ಲಿನ 8 ರಿಂದ ದ್ವಿತೀಯ ಪಿಯುಸಿವರೆಗಿನ 1 ಲಕ್ಷ ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗಿಯಾಗಿದ್ದಾರೆ.

‘ಮತದಾನ ಮಾಡುವಂತೆ ಪೋಷಕರನ್ನು ಮಕ್ಕಳು ಒತ್ತಾಯಿಸಿದರೆ ಅದು ಭಾವನಾತ್ಮಕವಾಗಿ ಪರಿಣಾಮ ಬೀರುತ್ತದೆ ಎಂಬ ನಂಬಿಕೆಯಿದೆ ಮತ್ತು ವಯಸ್ಕರು ಮುಂದಿನ ಪೀಳಿಗೆಗೆ ಉತ್ತರದಾಹಿಗಳಾಗಿರುತ್ತಾರೆ’ ಎಂದು ಕಾಮರೂಪ ಜಿಲ್ಲಾಧಿಕಾರಿ ಕೀರ್ತಿ ಜಲ್ಲಿ ತಿಳಿಸಿದ್ದಾರೆ.

‘ಅಂಚೆ ಇಲಾಖೆಯ ಸಹಕಾರದೊಂದಿಗೆ ಅಭಿಯಾನ ನಡೆಸಲಾಗಿದ್ದು, 15 ದಿನಗಳೊಗಾಗಿ ಎಲ್ಲ ಪೋಷಕರಿಗೆ ಪತ್ರ ತಲುಪಲಿದೆ. ಪತ್ರ ತಲುಪಿದ ಬಳಿಕ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಆ ಪತ್ರವನ್ನು ಹಿಡಿದುಕೊಂಡು ಸೆಲ್ಫಿ ತೆಗೆದು ಕಳುಹಿಸುವಂತೆ ಪ್ರೇರೇಪಿಸಲಾಗಿದೆ’ ಎಂದು ತಿಳಿಸಿದರು.

‘ಒಂದು ಲಕ್ಷ ಮನೆಗಳನ್ನು ಗುರಿಯಾಗಿಸಿಕೊಂಡು, ಕನಿಷ್ಠ 7 ಲಕ್ಷ ಜನರನ್ನು ಅಂದರೆ ಶೇಕಡ 90ರಷ್ಟು ಮತದಾರರನ್ನು ತಲುಪುವ ಉದ್ದೇಶವನ್ನು ಹೊಂದಲಾಗಿದೆ. ಉಳಿದ ಶೇಕಡ 10ರಷ್ಟು ಯುವ ಮತದಾರರನ್ನು ತಲುಪಲು ಬೇರೆ ವಿಧಾನವನ್ನು ಆನುಸರಿಸಲಾಗುತ್ತದೆ ’ ಎಂದು ಸ್ವೀಪ್ ಘಟಕದ ಉಸ್ತುವಾರಿ ಸುಶಾಂತ ಕುಮಾರ್‌ ದತ್ತ ಮಾಹಿತಿ ನೀಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT