ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಸ್ಥಾನ: ಆಂಧ್ರ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ, ಸಂಸದರ ರಾಜೀನಾಮೆಗೆ ಆಗ್ರಹ

Last Updated 24 ಜುಲೈ 2018, 12:18 IST
ಅಕ್ಷರ ಗಾತ್ರ

ಅಮರಾವತಿ:ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಮಂಗಳವಾರ ವೈಎಸ್‌ಆರ್‌ ಕಾಂಗ್ರೆಸ್‌ ಕರೆ ನೀಡಲಾಗಿದ್ದ ರಾಜ್ಯ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅತ್ತ, ಟಿಡಿಪಿ ಬಂದ್‌ಗೆ ವಿರೋಧ ವ್ಯಕ್ತ‍ಪಡಿಸಿದೆ. ಈ ಮೂಲಕ ರಾಜ್ಯದಲ್ಲಿ ರಾಜಕೀಯ ಮೇಲಾಟ ಮತ್ತು ಲೋಕಸಭೆ ಚುನಾವಣೆಯ ಚಟುವಟಿಕೆಗಳು ಗರಿಗೆದರುತ್ತಿವೆ. ಪಕ್ಷಗಳು ತಮ್ಮದೇ ಆದ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿವೆ.

ಇತ್ತ, ರಾಜ್ಯಕ್ಕೆ ವಿಶೇಷ ಸ್ಥಾನಕ್ಕಾಗಿ ಸಂಸತ್‌ನ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸದನಗಳಲ್ಲಿ ಟಿಡಿಪಿ ಸದಸ್ಯರು ಇಂದೂ ಮತ್ತೆ ಒತ್ತಾಯ ಮಾಡಿದ್ದಾರೆ. ಇದೇ ವಿಷಯ ಮುಂದಿಟ್ಟುಕೊಂಡು ತೆಲುಗು ದೇಶಂ ಪಾರ್ಟಿ(ಟಿಡಿಪಿ) ಎನ್‌ಡಿಎ ಸರ್ಕಾರದ ವಿರುದ್ಧ ಮುಂಗಾರು ಅಧಿವೇಶದನ ಮೊದಲ ದಿನವೇ ಅವಿಶ್ವಾಸ ನಿರ್ಣಯವನ್ನೂ ಮಂಡಿಸಿತ್ತು.

ರಾಜ್ಯಕ್ಕೆ ವಿಶೇಷ ಸ್ಥಾನಮಾನ ಹಾಗೂ ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷ್ಯ ಮಾಡಲಾಗಿದೆ ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಕೇಂದ್ರ ಸರ್ಕಾರದ ವಿರುದ್ಧ ಬಂದ್‌ಗೆ ಕರೆ ನೀಡಿತ್ತು.

ಟಿಡಿಪಿ ಸಂಸದರ ರಾಜೀನಾಮೆಗೆ ಆಗ್ರಹ
ಬಂದ್‌ನಲ್ಲಿ ಭಾಗವಹಿಸಿದ್ದ ವೈಎಸ್‌ಆರ್‌ನ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ದೂರಿ, ನ್ಯಾಯಕ್ಕಾಗಿ ಆಗ್ರಹಿಸಿದರು. ಟಿಡಿಪಿಯ ಎಲ್ಲಾ ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದೂ ಆಗ್ರಹಿಸಿದೆ. ಈ ಮೂಲಕ ರಾಜಕೀಯ ಬೆಳವಣಿಗೆಗಳು ಮತ್ತಷ್ಟು ಚುರುಕಾಗಿವೆ.

ಬಂದ್ ಪ್ರತಿಭಟನೆ ನಡೆಸಿದ ವೈಎಸ್‌ಆರ್‌ ಕಾಂಗ್ರೆಸ್‌ನ ಮುಖಂಡರನ್ನು ಪೊಲೀಸರು ಬಂಧಿಸಿದರು.
ಬಂದ್ ಪ್ರತಿಭಟನೆ ನಡೆಸಿದ ವೈಎಸ್‌ಆರ್‌ ಕಾಂಗ್ರೆಸ್‌ನ ಮುಖಂಡರನ್ನು ಪೊಲೀಸರು ಬಂಧಿಸಿದರು.

ವೈಎಸ್‌ಆರ್‌ ಸದಸ್ಯರ ಬಂಧನ
ವೈಎಸ್‌ಆರ್‌ ಕಾಂಗ್ರೆಸ್‌ ಕರೆ ನೀಡಿದ್ದ ಬಂದ್‌ಗೆ ಆಡಳಿತಾರೂಢ ಟಿಡಿಪಿ ವಿರೋಧ ವ್ಯಕ್ತಪಡಿಸಿದೆ. ಜತೆಗೆ ಬಂದ್‌ ಪ್ರತಿಭಟನೆಗಳನ್ನು ತಡೆದು, ಬಂದ್‌ನಲ್ಲಿ ಭಾಗವಹಿಸಿದ್ದ ವೈಎಸ್‌ಆರ್‌ನ ಹಲವು ಮುಖಂಡರನ್ನು ವಿವಿಧೆಡೆ ಬಂಧಿಸಿದೆ.

ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಲು ಮುಂದಾದ ಚಿತ್ತೂರು ಜಿಲ್ಲೆಯ ವೈಎಸ್‌ಆರ್‌ನ ಮುಖಂಡರಾದ ಆರ್‌.ಕೆ. ರೋಕ ಮತ್ತು ನಾರಾಯಣ ಸ್ವಾಮಿ ಅವರನ್ನು ಪುಟ್ಟೂರಿನಲ್ಲಿ ವಶಕ್ಕೆ ಪಡೆಯಲಾಗಿದೆ. ವಿಶಾಕಪಟ್ಟಣದಲ್ಲಿ ಮಾಜಿ ಸಚಿವ ಬೋಟ್ಸಾ ಸತ್ಯನಾರಾಯಣನ್‌ ಅವರನ್ನು, ತಿರುಪತಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಭೂಮಣ್ಣ ಕರುಣಾಕರ ರೆಡ್ಡಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುಂಟೂರು ಜಿಲ್ಲೆಯ ಮಚರ್ಲಾದಲ್ಲಿ ಶಾಸಕ ಪಿ. ರಾಮಕೃಷ್ಣ ರೆಡ್ಡಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಜತೆಗೆ ವಿವಿಧೆಡೆ ವೈಎಸ್‌ಆರ್‌ನ ಮುಖಂಡರನ್ನು ಬಂಧಿಸಲಾಗಿದೆ.

ಬಂದ್‌ ಕರೆ ಅಂಗವಾಗಿ ಶಿಕ್ಷಣ ಸಂಸ್ಥೆಗಳು ರಜೆ ಘೊಷಿಸಿದ್ದವು. ಆದರೆ, ರಾಜ್ಯ ಸಾರಿಗೆ ಬಸ್‌ಗಳ ಸಂಚಾರ ಇದ್ದು, ವಿರಳವಾಗಿತ್ತು. ವಿಜಯವಾಡದಲ್ಲಿ ಬಸ್‌ ಸಂಚಾರ ತಡೆಯಲು ಮುಂದಾದ ಪ್ರತಿಭಟನಾಕಾರರನ್ನು ತಡೆದ ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಬಳಿಕ ವೈಎಸ್‌ಆರ್‌ನ ಕಾರ್ಯಕರ್ತರು ತಮ್ಮ ನಾಯಕರ ಬಂಧನವನ್ನು ಖಂಡಿಸಿ ವಿವಿಧ ಠಾಣೆಗಳ ಮುಂದೆ ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು

ಕೇಂದ್ರದ ತಪ್ಪಿಗೆ ರಾಜ್ಯವನ್ನೇಕೆ ಶಿಕ್ಷಿಸಬೇಕು: ಚಂದ್ರಬಾಬು ನಾಯ್ಡು
ವೈಎಸ್‌ಆರ್‌ ಕಾಂಗ್ರೆಸ್‌ ರಾಜ್ಯದಲ್ಲಿ ಬಂದ್‌ ಆಚರಿಸುವ ಮೂಲಕ ಏನನ್ನು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೇಳಿದ್ದಾರೆ.

‘ಕೇಂದ್ರ ಸರ್ಕಾರ ಮಾಡುವ ತಪ್ಪುಗಳಿಗೆ ರಾಜ್ಯವನ್ನೇಕೆ ಶಿಕ್ಷಿಸಬೇಕು? ಬಂದ್‌ನಿಂದ ಏನು ಪ್ರಯೋಜನವಾಗಲಿದೆ. ಬದಲಿಗೆ, ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಲ್ಲವೇ? ಎಂದು ಅವರು ಕೇಳಿದ್ದಾರೆ.

ರಾಜ್ಯಸಭೆಯಲ್ಲಿ ಧ್ವನಿ ಎತ್ತಿದ ಗುಲಾಂ ನಬಿ ಆಜಾದ್‌
‘ಆಂಧ್ರ ಪ್ರದೇಶದ ಜನರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಂಧ್ರಕ್ಕೆ ಮೋಸ ಮಾಡುತ್ತಿದೆ’ ಎಂದು ವಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಅವರು ಮಂಗಳವಾರ ರಾಜ್ಯಸಭೆಯಲ್ಲಿ ಮತ್ತೆ ಧ್ವನಿ ಎತ್ತಿದ್ದಾರೆ. ‘ಆಂಧ್ರ ಪ್ರದೇಶಕ್ಕೆ 10 ವರ್ಷ ವಿಶೇಷ ಸ್ಥಾನ ನೀಡುವ ಕುರಿತು ಬಿಜೆಪಿ 2014ರಲ್ಲಿ ನೀಡಿದ್ದ ಭರವಸೆಗಳನ್ನು ಪೂರೈಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕುರಿತು ನೀಡಿದ್ದ ಭರಸವಸೆಗಳನ್ನು ಕೇಂದ್ರ ಸರ್ಕಾರ ಈಡೇರಿಸಿಲ್ಲ, ವಿಫಲವಾಗಿದೆ ಎಂದು ದೂರಿದ ಟಿಡಿಪಿ ಸದಸ್ಯರು ಎನ್‌ಡಿಎ ಮೈತ್ರಿಯಿಂದ ಹೊರ ನಡೆದಿದ್ದರು. ಇದಾದ ಬಳಿಕ, ಅವಿಶ್ವಾಸ ನಿರ್ಣಯವನ್ನೂ ಮಂಡಿಸಿದ್ದರು.

ದೆಹಲಿಯಲ್ಲಿ ಟಿಡಿಪಿ ಸಂಸದರು ಮಂಗಳವಾರ ಪ್ರತಿಭಟನೆ ನಡೆಸಿದರು.
ದೆಹಲಿಯಲ್ಲಿ ಟಿಡಿಪಿ ಸಂಸದರು ಮಂಗಳವಾರ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT