ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

20 ವರ್ಷಗಳ ಹಿಂದಿನ ಫಲಿತಾಂಶ ಪುನರಾವರ್ತನೆ- ಜೈರಾಮ್ ರಮೇಶ್

Published 21 ಮೇ 2024, 16:26 IST
Last Updated 21 ಮೇ 2024, 16:26 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಕೂಟವು ಸ್ಪಷ್ಟ ಬಹುಮತ ಪಡೆಯುವುದರೊಂದಿಗೆ ಜೂನ್ ನಾಲ್ಕರಂದು 2004ರ ಫಲಿತಾಂಶ ಪುನರಾವರ್ತನೆಯಾಗಲಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಂಗಳವಾರ ಅಭಿಪ್ರಾಯಪಟ್ಟರು. 

‘ನಮ್ಮದು ಅಮೆರಿಕದ ವ್ಯವಸ್ಥೆಯಂತೆ ಅಲ್ಲ, ಪಕ್ಷ ಕೇಂದ್ರಿತ ಪ್ರಜಾಪ್ರಭುತ್ವ. ಇದು ವ್ಯಕ್ತಿಗಳ ನಡುವಿನ ಸೌಂದರ್ಯ ಸ್ಪರ್ಧೆಯಂತೆ ಅಲ್ಲ, ಪಕ್ಷಗಳ ನಡುವಿನ ಆಯ್ಕೆ. ಈ ಬಾರಿ, 20 ವರ್ಷಗಳ ನಂತರ (ಬೀಸ್ ಸಾಲ್ ಬಾದ್) 2004ರ ಫಲಿತಾಂಶ ಪುನರಾವರ್ತನೆ ಆಗಲಿದೆ’ ಎಂದು ಹೇಳಿದರು.

‘ನಾವು ದೆಹಲಿ ತಲುಪುವುದು ಲಖನೌ ಮೂಲಕ. ಉತ್ತರ ಪ್ರದೇಶದಲ್ಲಿ 80 ಸ್ಥಾನಗಳಿವೆ. ರಾಹುಲ್ ಗಾಂಧಿ ನೇತೃತ್ವದ ‘ನ್ಯಾಯ ಯಾತ್ರೆ’ಗೆ ಪ್ರಯಾಗ್‌ರಾಜ್, ವಾರಾಣಸಿ, ಪ್ರತಾಪ್‌ಗಢ, ಲಖನೌ, ಅಮೇಠಿ, ರಾಯ್‌ಬರೇಲಿ, ಅಲೀಗಢ, ಮೊರಾದಾಬಾದ್, ಅಮ್ರೋಹಾ ಮತ್ತು ಸಂಭಲ್‌ನಲ್ಲಿ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು’ ಎಂದು ಹೇಳಿದರು.

‘ಉತ್ತರ ಪ್ರದೇಶದಲ್ಲಿ ಯುವಜನತೆ, ಮಹಿಳೆಯರು, ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯದವರು ನ್ಯಾಯ ಯಾತ್ರೆಗೆ ಬೆಂಬಲ ಸೂಚಿಸಿದ್ದರು. ಈ ಬಾರಿ ಪ್ರಧಾನಿಗೆ ಸಂಪೂರ್ಣ ಭ್ರಮನಿರಸನ ಕಾದಿದೆ. ಜನ ಅವರ ಬಗ್ಗೆ ನಿರಾಸೆಗೊಂಡಿದ್ದಾರೆ. ಜೂನ್ ನಾಲ್ಕರ ನಮ್ಮ ಫಲಿತಾಂಶದಲ್ಲಿ ದೊಡ್ಡ ಪಾಲು ಉತ್ತರ ಪ್ರದೇಶದಿಂದ ಬರಲಿದೆ. ಅಲ್ಲಿ ಈ ಬಾರಿ ಸಂಪೂರ್ಣ ಬದಲಾವಣೆ ಆಗಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT