ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಜೋಡೊ ಯಾತ್ರೆಯು ಕಾಂಗ್ರೆಸ್‌ ನಾಯಕರ ಸೋಲಿಗೆ ಕಾರಣ: ಶಿವರಾಜ್ ಸಿಂಗ್ ಚೌಹಾಣ್

Published 18 ಮಾರ್ಚ್ 2024, 12:43 IST
Last Updated 18 ಮಾರ್ಚ್ 2024, 12:43 IST
ಅಕ್ಷರ ಗಾತ್ರ

ಭೋಪಾಲ್‌; ರಾಹುಲ್‌ ಗಾಂಧಿ ನೇತೃತ್ವದ ಭಾರತ ಜೋಡೊ ಯಾತ್ರೆಗಳಿಂದಾಗಿ ಕಾಂಗ್ರೆಸ್‌ ಮೇಲೆ ದುಷ್ಪರಿಣಾಮ ಬೀರಿದೆ.. ಇದೇ ಕಾರಣಕ್ಕೆ ಅನೇಕ ನಾಯಕರು ಪಕ್ಷವನ್ನು ತೊರೆದರು ಹಾಗೂ ಕೆಲವರು ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರು ಎಂದು ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ಎರಡು ಯಾತ್ರೆಗಳು ಕಾಂಗ್ರೆಸ್‌ ಹೊಡೆಯಿರಿ, ಕಾಂಗ್ರೆಸ್‌ ಅನ್ನು ಬಿಟ್ಟುಬಿಡಿ (ಕಾಂಗ್ರೆಸ್ ತೋಡೊ, ಕಾಂಗ್ರೆಸ್ ಛೋಡೊ) ಎಂಬಂತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಹಲವೆಡೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲು ಕಂಡಿತು. ಹಾಗೂ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಯಶಸ್ವಿಯಾಯಿತು.ರಾಹುಲ್‌ ಗಾಂಧಿ‌ ಯಾತ್ರೆಗಳು ಸಾಗಿದ ಹಾದಿಯಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸಿತು. ನ್ಯಾಯ ಯಾತ್ರೆಯು ನಿಜಕ್ಕೂ ಕಾಂಗ್ರೆಸ್‌ಗೆ ಅನ್ಯಾಯ ಮಾಡಿದೆ ಎಂದು ಚೌಹಾಣ್ ವ್ಯಂಗ್ಯವಾಡಿದ್ದಾರೆ,

ಅಯೋಧ್ಯೆಯಲ್ಲಿ ನಡೆದ ಬಾಲ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದ ಆಹ್ವಾನವನ್ನು ಕಾಂಗ್ರೆಸ್ ಏಕೆ ನಿರಾಕರಿಸಿತು? ಎಂಬುದನ್ನು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಲಿ ಎಂದರು.

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಘಟನೆಯ ಬಗ್ಗೆ ಕಾಂಗ್ರೆಸ್ ಏಕೆ ಮೌನವಹಿಸಿದೆ, ‘ಇದು ತುಷ್ಟೀಕರಣದ ರಾಜಕೀಯವಲ್ಲವೇ?‘ ಎಂದು ಚೌಹಾಣ್ ಪ್ರಶ್ನಿಸಿದ್ದಾರೆ.

ಸೋನಿಯಾ ಗಾಂಧಿ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸದಿರುವ ಬಗ್ಗೆ ಕಾಂಗ್ರೆಸ್‌ ನಾಯಕರು ಉತ್ತರಿಸಲಿ ಎಂದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕರು ನಿರಂತರವಾಗಿ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಚೌಹಾಣ್ ಆರೋಪಿಸಿದ್ದಾರೆ.

ಭಾರತ ಜೋಡೊ ಯಾತ್ರೆಯು 2022ರಲ್ಲಿ ಹಾಗೂ ಭಾರತ ಜೋಡೊ ನ್ಯಾಯ ಯಾತ್ರೆ ಇದೇ ವರ್ಷ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT