ನವದೆಹಲಿ: ದೆಹಲಿ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಮಧ್ಯಾಹ್ನ ಲಘು ಭೂಕಂಪನ ಅನುಭವಕ್ಕೆ ಬಂದಿದೆ. ಸತತ ಎರಡನೇ ದಿನ ಈ ರೀತಿ ಭೂಕಂಪ ಆಗಿದೆ.
ರಿಕ್ಟರ್ ಮಾಪಕದಲ್ಲಿ 2.7 ತೀವ್ರತೆ ದಾಖಲಾಗಿದೆ. ಮಧ್ಯಾಹ್ನ 1.26ಕ್ಕೆ 5 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಹೇಳಿದೆ. ಭೂಕಂಪದಿಂದ ಯಾವುದೇ ರೀತಿಯ ಹಾನಿಸಂಭವಿಸಿಲ್ಲ.
ಭಾನುವಾರ 3.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಉತ್ತರ ದೆಹಲಿಯ ವಜೀರಾಬಾದ್ ಭೂಕಂಪದ ಕೇಂದ್ರ ಬಿಂದುವಾಗಿತ್ತು.