ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ, ಹೆಲಿಕಾಪ್ಟರ್ ಮಾಹಿತಿ ಒದಗಿಸಲು ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಸೂಚನೆ

Published 17 ಏಪ್ರಿಲ್ 2024, 4:22 IST
Last Updated 17 ಏಪ್ರಿಲ್ 2024, 4:22 IST
ಅಕ್ಷರ ಗಾತ್ರ

ಮುಂಬೈ: ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ಬಳಸುವ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ವಿವರಗಳನ್ನು ಒದಗಿಸುವಂತೆ ಚುನಾವಣಾ ಆಯೋಗ ತಿಳಿಸಿದೆ.

‘ಏಪ್ರಿಲ್ 12ರಂದು ಕಳುಹಿಸಿದ ಪತ್ರದಲ್ಲಿ ವಿಮಾನ ಮತ್ತು ಹೆಲಿಕಾಫ್ಟರ್‌ ವಿವರಗಳನ್ನು ಪ್ರಯಾಣಿಸುವ ಮೂರು ದಿನಗಳ ಮೊದಲು ಜಿಲ್ಲಾ ಚುನಾವಣಾ ಕಚೇರಿಗೆ ಒದಗಿಸಬೇಕು ಎಂದು ತಿಳಿಸಲಾಗಿತ್ತು. ಇದೀಗ ಪರಿಷ್ಕೃತ ವರದಿ ಕಳುಹಿಸಿದ್ದು, ಮೂರು ದಿನಗಳ ಬದಲಿಗೆ 24 ಗಂಟೆಗಳ ಮುಂಚಿತವಾಗಿ ಆಯೋಗಕ್ಕೆ ತಿಳಿಸಬೇಕು’ ಎಂದು ಮುಂಬೈ ಉಪನಗರ ಜಿಲ್ಲೆಯ ಉಪ ಚುನಾವಣಾಧಿಕಾರಿ ತೇಜಸ್ ಸಾಮೆಲ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.

‘ಆಯೋಗಕ್ಕೆ ಒದಗಿಸುವ ಮಾಹಿತಿಯಲ್ಲಿ ಹೆಲಿಕಾಫ್ಟರ್ ಅಥವಾ ವಿಮಾನ ಕಂಪನಿಯ ವಿವರ, ಪ್ರಯಾಣ ಪ್ರಾರಂಭವಾಗುವ ಮತ್ತು ತಲುಪುವ ಸ್ಥಳ, ಅದರಲ್ಲಿ ಪ್ರಯಾಣಿಸುವ ಜನರ ಸಂಖ್ಯೆ ಇರಬೇಕಿದೆ’ ಎಂದರು.

ಲೋಕಸಭೆ ಚುನಾವಣೆಗೆ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆಯ ಅಡಿಯಲ್ಲಿ ಈ ಮಾಹಿತಿಯನ್ನು ಒದಗಿಸಬೇಕು. ತಪ್ಪದೇ ಅದನ್ನು ಆಯೋಗಕ್ಕೆ ಕಳುಹಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT