ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಿಷನ್‌ ಕರ್ಮಯೋಗಿ'ಯಲ್ಲಿ ಕಲಿಯಲು ಅನುಮತಿ ಬೇಕಿಲ್ಲ: ಸಿಬ್ಬಂದಿ ಸಚಿವಾಲಯ

Published 16 ಜನವರಿ 2024, 22:51 IST
Last Updated 16 ಜನವರಿ 2024, 22:51 IST
ಅಕ್ಷರ ಗಾತ್ರ

ನವದೆಹಲಿ: ‘ಕೇಂದ್ರ ಸರ್ಕಾರದ ನೌಕರರು ಮಿಷನ್‌ ಕರ್ಮಯೋಗಿ ಆನ್‌ಲೈನ್‌ ವೇದಿಕೆಯಲ್ಲಿ ಕಲಿಕೆಯನ್ನು ಮುಂದುವರಿಸಲು ಯಾವುದೇ ಅನುಮತಿ ಬೇಕಿಲ್ಲ’ ಎಂದು ಸಿಬ್ಬಂದಿ ಸಚಿವಾಲಯ ಹೇಳಿದೆ.

‘ಸಚಿವಾಲಯಗಳು/ಇಲಾಖೆಗಳು/ಇತರ ಸಂಸ್ಥೆಗಳಲ್ಲಿನ ಸರ್ಕಾರಿ ನೌಕರರು ಐಜಿಒಟಿನಲ್ಲಿ (ಸಮಗ್ರ ಸರ್ಕಾರಿ ಆನ್‌ಲೈನ್‌ ತರಬೇತಿ) ಲಭ್ಯವಿರುವ ಕೋರ್ಸ್‌ಗಳಿಗೆ ದಾಖಲಾಗಲು ಮತ್ತು ಕಲಿಕೆ ಮುಂದುವರಸಲು ಅನುಮತಿಯ ಅಗತ್ಯವಿದೆ’ ಎಂದು ಹಿಂದಿನ ಅಧಿಕೃತ ನಿರ್ದೇಶನಗಳಲ್ಲಿ ನಮೂದಿಸಿರುವುದನ್ನು ಗಮನಿಸಿದ ಬೆನ್ನಲ್ಲೇ ಸಚಿವಾಲಯ ಈ ಸ್ಪಷ್ಟನೆ ನೀಡಿದೆ.

ಭಾರತ ಸರ್ಕಾರವು ನಾಗರಿಕ ಸೇವೆಗಳ ಸಾಮರ್ಥ್ಯ ನಿರ್ಮಾಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ (ಎನ್‌ಪಿಸಿಎಸ್‌ಸಿಬಿ) ಅಥವಾ ಮಿಷನ್‌ ಕರ್ಮಯೋಗಿ ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಸಾರ್ವಜನಿಕರ ಬದಲಾಗುತ್ತಿರುವ ಅಗತ್ಯತೆಗಳು ಮತ್ತು ಆಕಾಂಕ್ಷೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಾಗರಿಕ ಸೇವೆಗಳ ಸಾಮರ್ಥ್ಯವನ್ನು ಬೆಳೆಸಲು ಈ ಯೊಜನೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT