ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ, ರಿಯಲ್‌ ಎಸ್ಟೇಟ್‌ನಲ್ಲಿ ಜಾಫರ್‌ ಸಾದಿಕ್‌ ಹೂಡಿಕೆ: ಇ.ಡಿ ಆರೋಪ

Published 13 ಏಪ್ರಿಲ್ 2024, 13:23 IST
Last Updated 13 ಏಪ್ರಿಲ್ 2024, 13:23 IST
ಅಕ್ಷರ ಗಾತ್ರ

ನವದೆಹಲಿ: ಡಿಎಂಕೆ ಪಕ್ಷದಿಂದ ವಜಾಗೊಂಡಿರುವ ಪದಾಧಿಕಾರಿ ಜಾಫರ್‌ ಸಾದಿಕ್‌ ಮಾದಕವಸ್ತು ಕಳ್ಳಸಾಗಣೆಯಿಂದ ಗಳಿಸಿದ ₹ 40 ಕೋಟಿಗೂ ಹೆಚ್ಚು ಹಣವನ್ನು ಚಲನಚಿತ್ರ ನಿರ್ಮಾಣ, ಆತಿಥ್ಯ ಮತ್ತು ರಿಯಲ್‌ ಎಸ್ಟೇಟ್‌ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಶನಿವಾರ ಆರೋಪಿಸಿದೆ.

₹ 2,000 ಕೋಟಿಗೂ ಹೆಚ್ಚು ಮೌಲ್ಯದ ಸುಮಾರು 3,500 ಕೆ.ಜಿ ಸೂಡೊಫೆಡ್ರಿನ್‌ ಮಾದಕವಸ್ತುವಿನ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಜಾಫರ್‌ ಸಾದಿಕ್‌ (36) ಅವರನ್ನು ಎನ್‌ಸಿಬಿ ಕಳೆದ ತಿಂಗಳು ಬಂಧಿಸಿತ್ತು. ಬಳಿಕ ಡಿಎಂಕೆ ಅವರನ್ನು ಪಕ್ಷದಿಂದ ವಜಾಗೊಳಿಸಿತು.

ಈ ಪ್ರಕರಣದ ಸಂಬಂಧ ಏಪ್ರಿಲ್‌ 9ರಂದು ಚೆನ್ನೈ, ಮಧುರೆ ಮತ್ತು ತಿರುಚಿರಾಪಳ್ಳಿಯಲ್ಲಿ ದಾಳಿ ನಡೆಸಿದ್ದ ಇ.ಡಿ, ಈ ಕುರಿತು ಪ್ರಕಟಣೆ ಹೊರಡಿಸಿದೆ.

ಸಾದಿಕ್‌ ಅಂತರರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಸಿಂಡಿಕೇಟ್‌ನ ಮಾಸ್ಟರ್‌ಮೈಂಡ್‌ ಆಗಿದ್ದು, ಸೂಡೊಫೆಡ್ರಿನ್‌ ಮಾದಕವಸ್ತುವನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ ಕಳ್ಳಸಾಗಣೆ ಮಾಡಿದ ಆರೋಪವಿದೆ ಎಂದು ಇ.ಡಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT