ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

766ರಲ್ಲಿ 40 ಜಿಲ್ಲಾ ಕೇಂದ್ರಗಳು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕವಿಲ್ಲ: ಗಡ್ಕರಿ

Published 8 ಫೆಬ್ರುವರಿ 2024, 15:11 IST
Last Updated 8 ಫೆಬ್ರುವರಿ 2024, 15:11 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದ 766 ಜಿಲ್ಲಾಕೇಂದ್ರಗಳ ಪೈಕಿ 40ಕ್ಕೆ ಈವರೆಗೂ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಲೋಕಸಭೆಗೆ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಲಿಖಿತ ಹೇಳಿಕೆ ನೀಡಿರುವ ಅವರು, ‘ತೆಲಂಗಾಣದಲ್ಲಿ ಗರಿಷ್ಠ 6 ಜಿಲ್ಲಾ ಕೇಂದ್ರಗಳು ಈವರೆಗೂ 10 ಕಿ.ಮೀ. ವ್ಯಾಪ್ತಿಯಲ್ಲಿ ಹೆದ್ದಾರಿ ಸಂಪರ್ಕವನ್ನು ಪಡೆದಿಲ್ಲ. ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ–5 ಹಾಗೂ ರಾಜಸ್ಥಾನದ 4 ಜಿಲ್ಲಾ ಕೇಂದ್ರಗಳಿವೆ’ ಎಂದಿದ್ದಾರೆ.

‘ಕಳೆದ ಐದು ವರ್ಷಗಳಲ್ಲಿ (2018–19ರಿಂದ 2022–23) ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಗ ಪ್ರತಿ ದಿನಕ್ಕೆ 30 ಕಿ.ಮೀ. ಇದೆ. 2009–10 ಹಾಗೂ 2013–14ನೇ ಸಾಲಿನವರೆಗಿನ ಐದು ವರ್ಷಗಳಲ್ಲಿ ಈ ವೇಗ ಪ್ರತಿ ದಿನ 13 ಕಿ.ಮೀ. ಇತ್ತು’ ಎಂದು ತಮ್ಮ ಹೇಳಿಕೆಯಲ್ಲಿ ಗಡ್ಕರಿ ತಿಳಿಸಿದ್ದಾರೆ.

ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿರುವ ಗಡ್ಕರಿ, ‘ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ನಿರ್ವಹಣೆಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವೇ ಜವಾಬ್ದಾರಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT